ಗೋವಾದಲ್ಲಿ ಉಡುಪಿಯ ಉದ್ಯಮಿ ಸಾವು : ಮಂಗಳೂರು ಮೂಲದ ಅಕ್ಷತಾ ಬಂಧನ?

ಗೋವಾದಲ್ಲಿ ಉಡುಪಿಯ ಉದ್ಯಮಿ ಸಾವು : ಮಂಗಳೂರು ಮೂಲದ ಅಕ್ಷತಾ ಬಂಧನ?
0Shares

ಗೋವಾ: ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ಉದ್ಯಮಿ ಸಂದೀಪ್ ಸಾಲ್ಯನ್ ಸಾವಿನ ಪ್ರಕರಣದ ಪ್ರಮುಖ ಆರೋಪಿ ಮಹಿಳೆಯನ್ನು ಕ್ಯಾಲಂಗುಟ್ ಪೊಲೀಸರು ಇಂದು‌ ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಬಂಧಿತ ಆರೋಪಿ ಮಹಿಳೆ ಮೂಲತಃ ಮಂಗಳೂರು ನಿವಾಸಿ ಅಕ್ಷತಾ ಎಂದು ಗುರುತಿಸಲಾಗಿದೆ. ಆಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.

ಸಂದೀಪ್ ಸಾವಿನ ಪ್ರಕರಣ ಈಗ ಕೊಲೆ ಎಂದು ಪೊಲೀಸರು ಸಾಬೀತು ಪಡಿಸಿದ್ದಾರೆ. ಮಹಿಳೆ ರೆಸಾರ್ಟ್ ನಲ್ಲಿ ಕಟ್ಟರ್ ಕೇಳಿ ಸಂದೀಪ್ ಬಳಿ ಇದ್ದ ಚಿನ್ನ ಹಾಗೂ ಹಣವನ್ನು ದೋಚಿಕೊಂಡು ಹೋಗಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು ಈ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ ಈಗ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಸಂದೀಪ್ ಕೊಲೆಯ ಸತ್ಯಾಂಶ ತಿಳಿದುಬರಬೇಕಿದೆ.

ತನ್ನ ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದ ಸಂದೀಪ್, ಬಳಿಕ ಫ್ಲಾಟ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ಹಲವು ವರ್ಷಗಳ ಹಿಂದೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜೊತೆ ಸೇವೆ ಸಲ್ಲಿಸಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now