
ದಿನಾಂಕ: 23/05/2026 ರಂದು ಬೆಳಿಗ್ಗೆ 11:47 ಗಂಟೆಗೆ ಪಿರ್ಯಾದಿದಾರರಾದ ನಿರಂಜನ್ ಭಟ್ (46), ಕರ್ಕುಂಜೆ ಗ್ರಾಮ ಇವರು ಮನೆಗೆ ಬೀಗ ಹಾಕಿ ಹೆಂಡತಿ ಮಕ್ಕಳೊಂದಿಗೆ ಉಡುಪಿಗೆ ಹೋಗಿ, ಉಡುಪಿಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ 09:10 ಗಂಟೆಗೆ ಪಿರ್ಯಾದಿದಾರರು ಮನೆಗೆ ಬಂದಾಗ ಮನೆಯ ಎದುರಿನ ದ್ವಾರ ಬಾಗಿಲು ತೆರೆದುಕೊಂಡಿದ್ದು ಯಾರೋ ಕಳ್ಳರು ಬಾಗಿಲನ್ನು ಯಾವುದೋ ಆಯುಧದಿಂದ ಬಲತ್ಕಾರವಾಗಿ ಒಡೆದು ಬೀಗ ಮುರಿದಿರುವುದು ಕಂಡು ಬಂದಿದ್ದು ಒಳಗಡೆ ಹೋಗಿ ನೋಡಿದಾಗ ಬೆಡ್ ರೂಮ್ ಗೆ ಹಾಕಿದ ಬೀಗವನ್ನು ಒಡೆದು ರೂಮಿನಲ್ಲಿದ್ದ ಕಬ್ಬಿಣದ ಅಲ್ಮೇರಾ ಹಾಗೂ ಇನ್ನೊಂದು ಮರದ ಅಲ್ಮೇರಾದ ಬೀಗವನ್ನು ಒಡೆದು ಅದರಲ್ಲಿದ್ದ ಬಟ್ಟೆ ಬರೆ ವಸ್ತಗಳನ್ನು ಕೆಳಗಡೆ ಎಳೆದು ಹಾಕಿ ಅಲ್ಮೇರಾದಲ್ಲಿದ್ದ ಒಟ್ಟು 308 ಗ್ರಾಂ ಚಿನ್ನದ ಆಭರಣಗಳು ಅಂದಾಜು ಮೌಲ್ಯ 18,42,000/- ರೂಪಾಯಿಗಳು ಹಾಗೂ ಬೆಳ್ಳಿ ಒಟ್ಟು 2 ಕೆಜಿ ಅಂದಾಜು ಮೌಲ್ಯ 3 ಲಕ್ಷ ರೂಪಾಯಿ ಹಾಗೂ ನಗದು ಒಂದು ಲಕ್ಷ ರೂಪಾಯಿ. ಒಟ್ಟು 22,42,000/- ರೂಪಾಯಿ ಮೌಲ್ಯದ ಸ್ವತ್ತನ್ನು ಬೆಳಿಗ್ಗೆ 11:47 ಗಂಟೆಯಿಂದ ರಾತ್ರಿ 09:10 ಗಂಟೆಯ ನಡುವೆ ಯಾರೋ ಕಳ್ಳರು ಮನೆಯ ಬಾಗಿಲನ್ನು ಒಡೆದು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2026
ಕಲಂ: 331(3), 331(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now