ಅವುರ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಕೈಗಾ ನೌಕರರ ಸಂಘದ ವತಿಯಿಂದ ಕಲಿಕಾ ಪರಿಕರ ವಿತರಣೆ

ಅವುರ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಕೈಗಾ ನೌಕರರ ಸಂಘದ ವತಿಯಿಂದ ಕಲಿಕಾ ಪರಿಕರ ವಿತರಣೆ
0Shares

​ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಕೈಗಾ ನೌಕರರ ಸಂಘದ 15ನೇ ತಂಡದಿಂದ 35 ಜನರನ್ನು ಒಳಗೊಂಡ ನೌಕರರ ಸಂಘದ ಮೂಲಕ ಉಚಿತವಾಗಿ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಣಗಳನ್ನು ಮತ್ತು ಶಾಲೆಗಳಿಗೆ ಅವಶ್ಯಕವಾಗಿ ಬೇಕಾಗಿರುವ ಕ್ರೀಡಾ ಉಪಕರಣಗಳನ್ನು ವಿತರಿಸಿದರು.
​ಈ ಸಂದರ್ಭದಲ್ಲಿ ಮಾತನಾಡಿದ ವಿವೇಕ ನಾಯಕ ಇಂದಿನ ಪರಿಸರದಲ್ಲಿ ನಾವುಗಳು ಮುಂದೆ ಸಾಗಬೇಕಾದರೆ ಶಿಕ್ಷಣ ಅವಶ್ಯಕವಾಗಿ ಬೇಕು ಶಿಕ್ಷಣ ಇಲ್ಲದೆ ಹೋದರೆ ಎಷ್ಟು ಆಸ್ತಿ ಇದ್ದರು ವ್ಯರ್ಥ, ಇಂದಿನ ಸಮಾಜದಲ್ಲಿ ತಲೆ ಎತ್ತಿ ನಡೆಯಬೇಕೆಂದರೆ ನಮ್ಮಲ್ಲಿ ಶಿಕ್ಷಣವೆಂಬ ಪೂರಕ ಸಾಧನ ಅಡಕವಾಗಿರಬೇಕು ಆಗ ಸಮಾಜ ನಮ್ಮನ್ನು ಗೌರವಿಸುತ್ತದೆ ಅಂತಹ ವಿದ್ಯಾರ್ಥಿಗಳು ತಾವುಗಳಾಗಬೇಕು ಎಂದು ಮಾತನ್ನು ಹೇಳಿದರು.
​ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಧರ ಹುಟಗಿ, ಕುಬೇರಪ್ಪ ಪೂಜಾರ, ಪಂಕಜ ಸಾಳಂಕೆ, ವಿಜಯ ನಾರ್ವೇಕರ, ಶಾಲೆಯ ಮುಖ್ಯೋಪಾಧ್ಯಾಯರಾದ ಬೀರಪ್ಪ ,ಸಹ ಶಿಕ್ಷಕರಾದ ರತ್ನಾಕರ ತೆಲೋಲಿಕರ, ಬಿಸಿ ಊಟ ಸಿಬ್ಬಂದಿಯಾದ ಸುನಂದಾ ಗಾಂವ್ಕರ, ಅಂಗನವಾಡಿ ಕಾರ್ಯಕರ್ತೆ ಸತ್ಯವತಿ ದೇವದಾಸ, ಎಸ್‌ಡಿಎಂಸಿ ಅಧ್ಯಕ್ಷರಾದ ಸೋಮಣ್ಣ ವೇಳಿಪ ಮತ್ತು ಪದಾಧಿಕಾರಿಗಳು,ಪಾಲಕರ-ಪೋಷಕರು, ಊರಿನ ನಾಗರೀಕರು ಇದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now