ಎಂಬಿಎ ಅಧ್ಯಯನವು ಕೌಶಲ್ಯ ಮತ್ತು ಅವಕಾಶಗಳ ಸಂಗಮವಾಗಿದೆ: ಐವನ್ ಡಿಸೋಜಾ”

ಎಂಬಿಎ ಅಧ್ಯಯನವು ಕೌಶಲ್ಯ ಮತ್ತು ಅವಕಾಶಗಳ ಸಂಗಮವಾಗಿದೆ: ಐವನ್ ಡಿಸೋಜಾ”

0Shares

ಮಂಗಳೂರು: ಎಂಬಿಎ ಅಧ್ಯಯನವು ಕೌಶಲ್ಯಗಳು ಮತ್ತು ಅವಕಾಶಗಳ ಸಂಗಮವಾಗಿದೆ. ಇದು ನಾಯಕತ್ವ ಮತ್ತು ಆಡಳಿತಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ, ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

ಅವರು ಇತ್ತೀಚೆಗೆ ಯೂನಿವರ್ಸಿಟಿ ಈವ್ನಿಂಗ್ ಕಾಲೇಜಿನಲ್ಲಿ ನಡೆದ ಎಂಬಿಎ (ಐಬಿ) ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಈವ್ನಿಂಗ್ ಕಾಲೇಜಿನಲ್ಲಿ ಎಂಬಿಎ ಕಾರ್ಯಕ್ರಮ ಆರಂಭಿಸಲು ಎಂಎಲ್‌ಸಿ ಐವನ್ ಡಿಸೋಜಾ ಅವರ ವಿಶೇಷ ಕೊಡುಗೆಯನ್ನು ಎಂಬಿಎ ವಿಭಾಗದ ಸಲಹೆಗಾರರಾದ ಪ್ರೊ. ಜಯವಂತ ನಾಯಕ್ ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಗಣಪತಿ ಗೌಡ ಅವರು, ವಿದ್ಯಾರ್ಥಿಗಳಿಗೆ ನೀಡಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಮಹತ್ತರ ಸಾಧನೆ ಮಾಡಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಾರಂಗಲ್‌ನಲ್ಲಿ ನಡೆಯಲಿರುವ ಖೇಲೋ ಇಂಡಿಯಾ ರಾಷ್ಟ್ರಮಟ್ಟದ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಂಬಿಎ ವಿದ್ಯಾರ್ಥಿನಿ ನಿಶಾಲ್ ಡೆಲ್ಫಿನ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.

ಅರ್ಲಿನ್ ಶಾಲ್ಮಾ ಫರ್ನಾಂಡಿಸ್ ಅತಿಥಿಗಳನ್ನು ಸ್ವಾಗತಿಸಿದರು. ಮೊಹಮ್ಮದ್ ಶುಹಾನ್ ವಂದನಾರ್ಪಣೆ ಮಾಡಿದರು. ಶರಣ್ಯ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾಲೇಜಿನ ಶಿಕ್ಷಕರು ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now