
ಉಡುಪಿ ಜಿಲ್ಲಾ ಪೊಲೀಸರು ಅಕ್ಟೋಬರ್ 2025 – ಸೈಬರ್ ಜಾಗೃತಿ ತಿಂಗಳುದ ಅಂಗವಾಗಿ
ವಿಶೇಷ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಆರಂಭಿಸಿದ್ದಾರೆ —
CyberJagruthiUdupi ಮತ್ತು #CyberSafeUdupi
ಈ ಅಭಿಯಾನ ಅಕ್ಟೋಬರ್ 10ರಿಂದ ಅಕ್ಟೋಬರ್ 30ರವರೆಗೆ ನಡೆಯಲಿದೆ.
ಈ ಅಭಿಯಾನದ ಉದ್ದೇಶ — ಉಡುಪಿ ಜಿಲ್ಲೆಯನ್ನು ಸೈಬರ್ ಸುರಕ್ಷಿತ ಜಿಲ್ಲೆಯನ್ನಾಗಿ ರೂಪಿಸುವುದು.
ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಸೈಬರ್ ಸುರಕ್ಷತೆ ಮತ್ತು ಜಾಗೃತಿಯ ಅರಿವು ಮೂಡಿಸುವುದು.
ಈ ಜಾಗೃತಿ ಅಭಿಯಾನದಲ್ಲಿ ನಿಮ್ಮ ಸಹಭಾಗಿತ್ವವನ್ನು ನಾವು ಹಾರ್ದಿಕವಾಗಿ ಆಹ್ವಾನಿಸುತ್ತೇವೆ.
ಒಟ್ಟಾಗಿ, ಉಡುಪಿ ಜಿಲ್ಲೆಯನ್ನು ಮಾದರಿ ಸೈಬರ್ ಸುರಕ್ಷಿತ ಜಿಲ್ಲೆಯನ್ನಾಗಿ ಮಾಡೋಣ.
ಈ ಅಭಿಯಾನದ ಭಾಗವಾಗಿ, ನಾವು #ಹ್ಯಾಶ್‌ಟ್ಯಾಗ್ ಚಾಲೆಂಜ್ ಆಯೋಜಿಸಿದ್ದೇವೆ.
ಸಾರ್ವಜನಿಕರು ಸೈಬರ್ ಸುರಕ್ಷತೆ ಕುರಿತಾಗಿ ರೀಲ್‌ಗಳು, ಮೀಮ್ಸ್‌ಗಳು ಅಥವಾ ಚಿತ್ರಗಳು ಸೃಷ್ಟಿಸಿ
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಹುದು.
ನೀವು ಉಡುಪಿ ಜಿಲ್ಲಾ ಪೊಲೀಸ್ ಅಧಿಕೃತ ಪುಟಗಳನ್ನು ಟ್ಯಾಗ್ ಮಾಡಿ,
CyberJagruthiUdupi ಮತ್ತು #CyberSafeUdupi ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ.
ಅತ್ಯುತ್ತಮ ಕೃತಿಗಳನ್ನು ಆಯ್ಕೆಮಾಡಿ,
ಅಕ್ಟೋಬರ್ 31ರಂದು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬಹುಮಾನ ವಿತರಣೆ ನಡೆಯಲಿದೆ.
ಇದೇ ರೀತಿಯಾಗಿ, ನಾವು ಒಂದು ಸೈಬರ್ ಸುರಕ್ಷತಾ ಪ್ರತಿಜ್ಞಾ ಲಿಂಕ್ ಕೂಡ ನೀಡಿದ್ದೇವೆ.
ಅದರಲ್ಲಿ ನೀವು ಪ್ರತಿಜ್ಞೆ ತೆಗೆದುಕೊಳ್ಳಬಹುದು ಮತ್ತು ನಿಮ್ಮ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಪಡೆಯಬಹುದು.
ಶಾಲೆಗಳು ಮತ್ತು ಕಾಲೇಜುಗಳು ನಡೆಸುವ ಗುಂಪು ಪ್ರತಿಜ್ಞಾ ಕಾರ್ಯಕ್ರಮಗಳ ಚಿತ್ರಗಳು ಕೂಡ
CyberJagruthiUdupi ಮತ್ತು #CyberSafeUdupi ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪೋಸ್ಟ್ ಮಾಡಬಹುದು.
ಒಟ್ಟಾಗಿ, ಜಾಗೃತ, ಎಚ್ಚರಿಕೆಯಿಂದ ಹಾಗೂ ಸುರಕ್ಷಿತ ಸೈಬರ್ ಸಮಾಜವನ್ನು ನಿರ್ಮಿಸೋಣ.
ಸೈಬರ್ ಜಾಗೃತರಾಗಿ – ಸುರಕ್ಷಿತರಾಗಿ!
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now