
ಜಪಾನ್, ಮಾ. 14: ಸಣ್ಣ ಪುಟ್ಟ ಕಷ್ಟಗಳು ಬಂದರೂ ಸಾಕೂ ಜೀವವನೇ (Life) ಸಾಕಾಗಿದೆ ಎಂದು ತಲೆ ಕೆಡಿಸಿಕೊಳ್ಳುವ ಯುವಜನತೆಯ ಮಧ್ಯೆ, ವಯಸ್ಸಾದ್ರೂ (age) ಕೂಡಾ ತಮ್ಮ ಜೀವನೋತ್ಸಾಹದ ಮೂಲಕವೇ ಚಿರ ಯುವಕರಂತೆ ಜೀವನ ಸಾಗಿಸುತ್ತಿರುವ ಅದೆಷ್ಟೋ ಹಿರಿಯರಿದ್ದಾರೆ. ಅವರುಗಳಲ್ಲಿ ಜಪಾನಿನ ಈ ಶತಾಯುಷಿ ಅಜ್ಜಿ (Elderly woman) ಕೂಡಾ ಒಬ್ಬ್ರು. 108 ರ ಇಳಿ ವಯಸ್ಸಿನಲ್ಲೂ ಕೌರಿಕ (baeber) ವೃತ್ತಿಯನ್ನು ಮಾಡುತ್ತಾ ಸ್ವಾವಲಂಬಿ ಬದುಕನ್ನು ನಡೆಸುತ್ತಿರುವ ಈ ಶತಾಯುಷಿ ಅಜ್ಜಿ ವಿಶ್ವ ಹಿರಿಯ ಮಹಿಳಾ ಕ್ಷೌರಿಕ (world’s oldest female barber) ಎಂಬ ಬಿರುದನ್ನು ಗಳಿಸಿದ್ದಾರೆ. 94 ವರ್ಷಗಳಿಂದ ಈ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿರುವ ಇವರು ಇದೀಗ ಗಿನ್ನೆಸ್ (Guinness) ದಾಖಲೆಗೆ (record) ಭಾಜನರಾಗಿದ್ದಾರೆ. ಈ ಸುದ್ದಿ ಇದೀಗ ವೈರಲ್ ಆಗುತ್ತಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























