ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 32

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 32

0Shares

ಅಪ್ಪ ಹೇಳಿದ್ದು ಸುಳ್ಳಾ


ಕೋವಿಡ್ ನಲ್ಲಿ ಸತ್ತ ಅಪ್ಪನ ಚಿತೆ ಗೆ ಬೆಂಕಿ ಇಟ್ಟ ಮಗ ಉರಿಯುತಿದ್ದ ಬೆಂಕಿಯನ್ನೇ ನೋಡುತಿದ್ದ ಅಪ್ಪನ ಕಾಲು ಕೈ ತೊಡೆಯ ತನಕ ಉರಿದು ಬೂದಿ ಆಗುತಿತ್ತು😔

ತಿಂಗಳ ಹಿಂದೆ ಅಪ್ಪ ಹೇಳಿದ್ದ ಮಾತುಗಳು ನೆನಪಿಗೆ ಬಂದಿತ್ತು ಆತನಿಗೆ, ಅಂದು ಅಪ್ಪ ಹೇಳಿದ್ದರು ” ನೋಡೋ ನಾನು ಬಾರಿಯ ಕಾಳು ಆಗಿ ಹುಟ್ಟಿದ್ದೇ ,ಅಂದು ಬಡತನದಲ್ಲಿ ಹುಟ್ಟಿದ್ದು ನನ್ನ ತಪ್ಪಲ್ಲ ಇಂದು ಸಾಹುಕಾರ್ ಕಾಳಪ್ಪ ಆಗಿದ್ದೇನೆ, ಬಡವನಾಗಿ ಇದ್ದವ ಇಂದು ಹೆಸರು ,ಹಣ ,ಬಂಗಲೆ ,ಕಾರು ,ಬ್ಯಾಂಕ್ ಬ್ಯಾಲೆನ್ಸ್,ಆಳು,ನೂರಾರು ಬೆಂಬಲಿಗರು,ಇಷ್ಟನ್ನು ಸಂಪಾದಿಸಿದ್ದೇನೆ,ಬರುವಾಗ ಬರಿಯ ಕೈಯ್ಯಲ್ಲಿ ಬಂದದ್ದು ನಿನ್ನತಪ್ಪಲ್ಲ,ಆದರೆ ಬರಿಯ ಕೈಯ್ಯಲ್ಲಿ ಹೋದರೆ ಅದು ನಿನ್ನ ತಪ್ಪು ಎಂದಿದ್ದರು😔

ಪಟ್ ಎಂದು ತಲೆ ಬುರುಡೆ ಒಡೆದಾಗ ಮತ್ತೆ ಹಳೆಯ ನೆನಪಿಂದ ಹೊರಬಂದಿದ್ದ ಮಗ ಕೈ ಕಾಲು ತಲೆ ಎಲ್ಲ ಸುಟ್ಟು ಬೂದಿ ಯಾಗಿತ್ತು ಮಗ ಮತ್ತೆ ಮತ್ತೆ ನೋಡಿದ ತಂದೆಯನ್ನು ಕೈ ಕಾಲಿ ಯಾಗೆ ಇತ್ತು ,ಆಸ್ತಿ,ಹಣ ,ಬ್ಯಾಂಕ್ ಬ್ಯಾಲೆನ್ಸ್ ಎಲ್ಲಾ ಬಿಟ್ಟು ಹೋಗಿದ್ದಾರೆ ,ಬರುವಾಗಲೂ ಕಾಲಿ ಕೈ ಹೋಗುವಾಗಲೂ ಕಾಲಿ ಕೈ….ಯಾವುದನ್ನೂ ಕೊಂಡು ಹೋಗಿಲ್ಲ😔 …ಅಪ್ಪ ನನ್ನ ಕರೆದು ಕೂಗಿ ಹೇಳಬೇಕೆಂದು ಕೊಂಡಿದ್ದ …ಅಪ್ಪ ಮಾತ್ರ ಶಾಶ್ವತ ವಾಗಿ ಕೂಗಿದರೂ ಕೇಳಿಸಲಾಗದ ಲೋಕಕ್ಕೆ ಹೋಗಿ ಆಗಿತ್ತು😔😔

ಆತನ ಮನದಲ್ಲಿ ಮತ್ತೆ ಮತ್ತೆಒಂದು ಪ್ರಶ್ನೆ,ಉತ್ತರವಿಲ್ಲದ ಪ್ರಶ್ನೆಯಾಗೇ ಕಾಡ ತೊಡಗಿತ್ತು …
?
?
?
?
?
ಅಪ್ಪ ಹೇಳಿದ್ದು ಸುಳ್ಳ ??

ಹೌದು ಹಣ ಹಣ ಹಣ ಎಂದು ಎಲ್ಲವನ್ನು ಮರೆಯುವ ನಾವುಗಳು,ಬರಿಯ ಕಾಲಿ ಕೈಯ್ಯಲ್ಲಿ ಈ ಲೋಕಕ್ಕೆ ಬಂದು
ಹಣದೊಂದಿಗೆ ಅಹಂಕಾರ,ಸ್ವಾರ್ಥ ವನ್ನು ತಲೆಯೊಳಗೆ ತುಂಬಿ ಕೊಂಡು
ಕೊನೆಗೆ ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗಲೇಬೇಕು ಅಲ್ಲವೇ ??
🔴🔴🔴🔴🔴🔴

ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..

9945130630 (ವಾಟ್ಸಪ್)


ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now