ಕನ್ನಡ ಸಂಘ ಸಾಂತಕ್ರೂಜ್ ಸುಜಾತಾ ಆರ್.ಶೆಟ್ಟಿ ಅಧ್ಯಕ್ಷೆಯಾಗಿ ಪುನಾರಾಯ್ಕೆ

ಕನ್ನಡ ಸಂಘ ಸಾಂತಕ್ರೂಜ್ ಸುಜಾತಾ ಆರ್.ಶೆಟ್ಟಿ ಅಧ್ಯಕ್ಷೆಯಾಗಿ ಪುನಾರಾಯ್ಕೆ

0Shares

ಮುಂಬಯಿ, ನ.೧೦: ಕನ್ನಡ ಸಂಘ ಸಾಂತಕ್ರೂಜ್ ಇದರ ೨೦೨೪-೨೭ರ ಕಾಲಾವಧಿಗೆ ಅಧ್ಯಕ್ಷರಾಗಿ ಸುಜಾತಾ ಆರ್ ಶೆಟ್ಟಿ ಅವರು ಪುನಾರಾಯ್ಕೆಯಾಗಿದ್ದು, ಕಳೆದ ಗುರುವಾರ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲಿ ೬೭ನೇ ವಾರ್ಷಿಕ ಮಹಾಸಭೆಯಲ್ಲಿ ೨೦೨೪-೨೭ರ ಕಾಲಾವಧಿಗೆ ಕಾರ್ಯಕಾರಿ ಸಮಿತಿಯ ಆಯ್ಕೆ ನೇರವೇರಿತು.

ಗೌರವ ಅಧ್ಯಕ್ಷರಾಗಿ ಎಲ್ ವಿ.ಅಮೀನ್, ಉಪಾಧ್ಯಕ್ಷ ಭುಜಂಗ ಆರ್.ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಜಯ ವಿ.ಪೂಜಾರಿ, ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಗೌರವ ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬಿ.ರವೀಂದ್ರ ಅಮೀನ್, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ವನಿತಾ ವೈ ನೋಂದಾ, ಕಾರ್ಯದರ್ಶಿಯಾಗಿ ಲಕ್ಷ್ಮೀ ಎನ್.ಕೋಟ್ಯಾನ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ವಿಜಯಕುಮಾರ್ ಕೆ. ಕೋಟ್ಯಾನ್, ಕಾರ್ಯದರ್ಶಿ ಶಕಿಲಾ ಪಿ.ಶೆಟ್ಟಿ, ಆಡಳಿತ ಸಮಿತಿಯ ಸದಸ್ಯರಾಗಿ ಸುಮಾ ಎಂ.ಪೂಜಾರಿ, ಶಾಲಿನಿ ಜಿ.ಶೆಟ್ಟಿ, ಲಿಂಗಪ್ಪ ಅಮೀನ್, ವಾಸುದೇವ ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಲೆಕ್ಕ ಪರಿಶೋಧಕರಾಗಿ ಸಿಎ| ಪ್ರಕಾಶ್ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾಗಿ ಎಂ.ಎನ್ ಸುನಿಲ್, ನಾರಾಯಣ್ ಎಸ್.ಶೆಟ್ಟಿ, ಬಿ.ಆರ್ ಪೂಂಜ, ಡಾ| ಆರ್ ಕೆ.ಶೆಟ್ಟಿ, ಭೋಜ ಎನ್ ಶೆಟ್ಟಿ ಮೊದಲಾದವರನ್ನು ಪುನರ್ ಆಯ್ಕೆ ಮಾಡಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now