ಧಾರಿಣಿ ಉಪಾಧ್ಯ ಬಿ. ಅವರಿಗೆ ಡಾ. ಕೋಟ ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿ

ಧಾರಿಣಿ ಉಪಾಧ್ಯ ಬಿ. ಅವರಿಗೆ ಡಾ. ಕೋಟ ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿ
0Shares

2026-27ನೇ ಸಾಲಿನ ಡಾ. ಕೋಟ ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿಗೆ ಕಾರ್ಕಳದ ಕುಮಾರಿ ಧಾರಿಣಿ ಉಪಾಧ್ಯ ಬಿ. ಇವರು ಆಯ್ಕೆಯಾಗಿರುತ್ತಾರೆ.

ಧಾರಿಣಿ ಇವರು ಕಾರ್ಕಳದ ಶ್ರೀಮದ್ ಭುವನೇoದ್ರ ಪ್ರೌಢಶಾಲೆಯ 10ನೇ ತರಗತಿ ಕನ್ನಡ ಮಾಧ್ಯಮ ವಿಭಾಗದ ವಿದ್ಯಾರ್ಥಿನಿಯಾಗಿದ್ದು , ಶಿಕ್ಷಕ ದಂಪತಿಗಳಾದ ಶ್ರೀ ಸುಬ್ರಹ್ಮಣ್ಯ ಉಪಾಧ್ಯ ಹಾಗೂ ಶ್ರೀಮತಿ ಲಕ್ಷ್ಮೀ ಹೆಗ್ಡೆ ಇವರ ಸುಪುತ್ರಿಯಾಗಿದ್ದಾರೆ. ಗಾಯನ, ಭಾಷಣ, ಬರೆವಣಿಗೆ … ಹೀಗೆ ಬಹುಮುಖ ಪ್ರತಿಭೆಯ ಧಾರಿಣಿ ಅವರು ಕಾರ್ಕಳ ಹೊಸಸಂಜೆ ಬಳಗದ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ , ಸಭಿಕರ ಪ್ರೋತ್ಸಾಹ, ಮೆಚ್ಚುಗೆ, ಅಭಿನಂದನೆ ಗಳಿಸಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now