
ಉಡುಪಿ : ಉಡುಪಿ ಧರ್ಮ ಪ್ರಾಂತ್ಯದ ಹಲವು ಚರ್ಚ್ ಗಳಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿದ್ದ, ಧರ್ಮ ಪ್ರಾಂತ್ಯದ ಹಿರಿಯ ಮತ್ತು ನಿವೃತ್ತ ಧರ್ಮಗುರು ವO. ಫಾ. ಚಾರ್ಲ್ಸ್ ಲುವಿಸ್ (81) ಇಂದು ನಿಧನವಾಗಿದ್ದಾರೆ.
ಉಡುಪಿ ಕುಂದಾಪುರದ ಪಡುಕೋಣೆಯಲ್ಲಿ 1945 ನವೆಂಬರ್ 23ರಂದು ಜನಿಸಿದ್ದ ಅವರು, 1971 ರಲ್ಲಿ ಧರ್ಮಗುರುಗಳಾಗಿ ದೀಕ್ಷೆಯನ್ನು ಸ್ವೀಕರಿಸಿದ್ದರು. ಬಳಿಕ ಪ್ರಸ್ತುತ ಮಂಗಳೂರು ಧರ್ಮ ಪ್ರಾಂತ್ಯದ ಬಜ್ಪೆ, ಪುತ್ತೂರಿನಲ್ಲಿ, ಫಾದರ್ ಮುಲ್ಲರ್ಸ್ ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಆದ್ಯಪಾಡಿ, ಕೊಳಲಗಿರಿ, ಆಗ್ರಾರ್, ಕಾಟಿಪಳ್ಳ, ಮೂಡುಬೆಳ್ಳೆ, ಕುಂಟಲ್ ನಗರ, ಪಾಂಬೂರು, ಅತ್ತೂರು, ತ್ರಾಸಿಯಲ್ಲಿ ಪ್ರಧಾನ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತರಾದ ಬಳಿಕ ಕುಂದಾಪುರದ ಬಸ್ರೂರಿನಲ್ಲಿಯೂ ಸೇವೆಯನ್ನು ನೀಡಿದ್ದಾರೆ. 2023 ರಿಂದ ಕಲ್ಯಾಣ್ಪುರದ ಮಿಲಾಗ್ರಿಸ್ ಹೋಮ್ ನಲ್ಲಿ ನಿವೃತ್ತ ಜೀವನದಲ್ಲಿ ಇದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now