
ಆರೋಗ್ಯ ಭಾರತಿ ಕಾರ್ಕಳ ಇವರ ವತಿಯಿಂದ ಮಾಳ ಗ್ರಾಮದ ಎಡಪಾಡಿ ತ್ರಿಭುವನ ತೋಟದ ಮನೆಯಲ್ಲಿ ಆಯೋಜಿಸಿದ್ದ ಧನ್ವಂತರಿ ಯಾಗದಲ್ಲಿ ಭಾಗವಹಿಸಿದೆ.
ಈ ಸಂದರ್ಭದಲ್ಲಿ ಶ್ರೀನಿವಾಸ ಸಸ್ಯ ನರ್ಸರಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಉಚಿತವಾಗಿ ಸಸ್ಯಗಳನ್ನು ವಿತರಿಸಿದೆ. ಗಿಡಮೂಲಿಕೆಗಳ ಔಷಧೀಯ ಗುಣಗಳು, ಅವುಗಳ ಮಾರುಕಟ್ಟೆ ಹಾಗೂ ಬಳಕೆಯ ಕುರಿತು ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಆರೋಗ್ಯ ಭಾರತಿ ವತಿಯಿಂದ ನಡೆಯುತ್ತಿರುವ ಇಂತಹ ಉಪಯುಕ್ತ ಕಾರ್ಯಕ್ರಮಗಳು ಪರಿಸರದ ಪ್ರತಿಯೊಂದು ಮನೆಗೂ ತಲುಪಲಿ ಎಂದು ಶುಭ ಹಾರೈಸಿದೆ.
ಕಾರ್ಯಕ್ರಮವು ಡಾ. ಸತ್ಯನಾರಾಯಣ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now