ಒಲಿಂಪಿಕ್ಸ್ ಕ್ರೀಡಾಪಟು ಮನೆ ಕಳ್ಳತನ ಮಾಡಿದ್ದ ಖದೀಮ ಅರೆಸ್ಟ್: ಚಿನ್ನ, ಬೆಳ್ಳಿ, ಕಂಚಿನ ಪದಕಗಳೂ ವಶಕ್ಕೆ..!!

ಒಲಿಂಪಿಕ್ಸ್ ಕ್ರೀಡಾಪಟು ಮನೆ ಕಳ್ಳತನ ಮಾಡಿದ್ದ ಖದೀಮ ಅರೆಸ್ಟ್: ಚಿನ್ನ, ಬೆಳ್ಳಿ, ಕಂಚಿನ ಪದಕಗಳೂ ವಶಕ್ಕೆ..!!
0Shares

ಬೆಂಗಳೂರು: ಖ್ಯಾತ ಹಾಕಿ ಕ್ರೀಡಾಪಟು ಎಂ.ಎಂ. ಸೋಮಯ್ಯ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ವೃತ್ತಿಪರ ಕಳ್ಳನಾಗಿರುವ ಆರೋಪಿ, ಮನೆಗೆ ಬೀಗ ಹಾಕಿರುವುದನ್ನು ಗಮನಿಸಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.

ಕಳೆದ ತಿಂಗಳು ಸೋಮಯ್ಯ ಅವರು ಬೆಂಗಳೂರಿನಿಂದ ಕೊಡಗಿಗೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಬಾಗಿಲು ಮುರಿದು ಒಳನುಗ್ಗಿದ್ದ ಆರೋಪಿ, ಚಿನ್ನದ ಪದಕ, ಬೆಳ್ಳಿ ಪದಕ, ಎರಡು ಕಂಚಿನ ಪದಕಗಳು, ಎರಡು ಕಪ್‌ಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದ.

1980ರ ಒಲಿಂಪಿಕ್ಸ್ ಹಾಕಿ ಕ್ರೀಡಾಕೂಟದಲ್ಲಿ ಗಳಿಸಿದ್ದ ಚಿನ್ನದ ಪದಕ, 1982ರ ನವದೆಹಲಿ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿದ್ದ ಬೆಳ್ಳಿ ಪದಕ ಹಾಗೂ 1986ರ ಸಿಯೋಲ್ ಏಷ್ಯನ್ ಗೇಮ್ಸ್‌ನಲ್ಲಿ ಪಡೆದಿದ್ದ ಕಂಚಿನ ಪದಕ ಕಳ್ಳತನವಾಗಿದ್ದವು. 1982ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಳಿಸಿದ್ದ ಕಂಚಿನ ಪದಕ, ಬೆಳ್ಳಿ ಕಪ್‌ಗಳು, ಬಳೆಗಳು, ಬೆಳ್ಳಿ ಚಮಚಗಳು ಹಾಗೂ ಚಿನ್ನದ ನಾಣ್ಯಗಳನ್ನೂ ಕದ್ದಿದ್ದ ಎನ್ನಲಾಗಿದೆ.

ಒಟ್ಟು 3.53 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 30 ಸಾವಿರ ರೂಪಾಯಿ ನಗದನ್ನು ಆರೋಪಿ ದೋಚಿದ್ದ ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಇಂದಿರಾನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳವು ಮಾಡಿದ್ದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now