
ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ “ ಗುರುಕುಲ ಗೋಕುಲಂ ಸದ್ಮನ”
ಎಂಬ ನೂತನ ಗೋ ಶಾಲೆಯ ಉದ್ಘಾಟನೆಗೊಂಡಿತು . ಆಂಧ್ರಪ್ರದೇಶದ ಚಿತ್ತೂರಿನ ಪುಂಗನೂರು ಎನ್ನುವ ವಿಶೇಷ ಗಿಡ್ಡ ತಳಿಯ ಹಸುಗಳಿಗಾಗಿ ವಿದ್ಯಾ ಸಂಸ್ಥೆ ಮುಂಭಾಗದಲ್ಲಿ ಸುಂದರ ಕುಟೀರವನ್ನು ನಿರ್ಮಿಸಲಾಗಿತ್ತು. ದೀಪಾವಳಿ ಹಬ್ಬದ ಸಂಭ್ರಮದ ಜೊತೆಗೆ ಗೋ ಪೂಜೆಯ ದಿನದಂದು ಹಟ್ಟಿಯಂಗಡಿ ವರಸಿದ್ಧಿ ವಿನಾಯಕ ದೇವಳದ ಆಡಳಿತ ಮೊಕ್ತೇಸರ ಬಾಲಚಂದ್ರ ಭಟ್ ದಂಪತಿ ಸಮೇತರಾಗಿ ಆಗಮಿಸಿ ಗೋಶಾಲೆಯನ್ನು ಉದ್ಘಾಟಿಸಿ, ಪುಂಗನೂರು ಹಸುಗಳ ಪಾದಪೂಜೆ ಮಾಡಿ ಮಾತನಾಡಿ ” ಗಾವೋ ವಿಶ್ವಸ್ಯ ಮಾತರಃ ” ವಿಶ್ವದ ಮಕ್ಕಳ ತಾಯಿ ಗೋಮಾತೆ ಎಂದು ನಂಬಿ ಪೂಜಿಸುವ ಸಂಸ್ಕೃತಿ ನಮ್ಮದು. ಮನುಕುಲದ ಪಾಪ ಕಾರ್ಯವು ಕಲಿಯುಗದಲ್ಲಿ ಪರಿಹಾರವಾಗುವುದಿದ್ದರೆ, ಅದು ಗೋ ಸೇವೆಯಿಂದ ಮಾತ್ರ ಸಾಧ್ಯ. ಮುಕ್ಕೋಟಿ ದೇವತೆಗಳ ಆವಾಸಸ್ಥಾನವೇ ಗೋಮಾತೆಯ ಒಡಲು. ಇಂತಹ ಗೋಮಾತೆಯ ನಿತ್ಯ ದರ್ಶನವೇ ಪುಣ್ಯ ದರ್ಶನದಂತೆ. ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂತಹ ಪುಣ್ಯತಮಕಾರ್ಯ ಅತಿ ಶ್ರೇಷ್ಠವಾದದ್ದು ಎಂದು ಸರ್ವರಿಗೂ ಶುಭ ಕೋರಿದರು. ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕ ಕೆ. ಸುಭಾಶ್ವಂದ್ರ ಶೆಟ್ಟಿ ಹಾಗೂ ಅನುಪಮಾ ಎಸ್ ಶೆಟ್ಟಿ ಗೋಪೂಜೆಯಲ್ಲಿ ಭಾಗಿಯಾದರು . ಪ್ರಾಂಶುಪಾಲ ಡಾ. ರೂಪಾ ಶೆಣೈ ಪುಷ್ಪ ನೀಡಿ ಸ್ವಾಗತಿಸಿದರು. ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಸರ್ವ ಸದಸ್ಯರು, ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಮಾರಿ ಅರ್ಚನಾ ಪ್ರಾರ್ಥಿಸಿದರು. ಡಾ. ಕೃಷ್ಣರಾಜ ಕರಬ ನಿರೂಪಿಸಿ ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now