
“ಚಿಗುರು ಚಿತ್ರಕಲಾ ತರಗತಿಗಳು – “ದೀಪಾವಳಿ ಸಂಭ್ರಮ”
ಜಿಲ್ಲಾ ಬಾಲಭವನದಲ್ಲಿ “ದೀಪಾವಳಿ ಸಂಭ್ರಮ” ಅದ್ಧೂರಿಯಾಗಿ ನೆರವೇರಿತು.
ಶ್ರೀ ಜಯ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರು ಕೆ. ಕೃಷ್ಣಮೂರ್ತಿ ಆಚಾರ್ಯ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸೈನೇಜ್ ಅಸೋಸಿಯೇಷನ್ ಅಧ್ಯಕ್ಷರು ಹರೀಶ್ ಅಮೀನ್, ರಾಮಕ್ಷತ್ರಿಯ ಯುವ ಸಂಘ ನಗರ ಘಟಕದ ಬ್ರಿಜೇಶ್ ಬಿ.ವಿ ಮತ್ತು ಬಜಾಜ್ ಲೈಫ್ ಇನ್ಶೂರೆನ್ಸ್ ಕುಂದಾಪುರದ ಮುಖ್ಯ ವ್ಯವಸ್ಥಾಪಕರಾದ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.
ಚಿಗುರು ಚಿತ್ರಕಲಾ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ್ ಕೆ. ಬೈಲೂರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಶೋಭಾ.ಕೆ ನಿರೂಪಿಸಿ, ವಿನಯಶ್ರೀ ವಂದಿಸಿದರು.
ನಂತರ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಹಣತೆ ಅಲಂಕಾರ ಸ್ಪರ್ಧೆ ನಡೆಸಿ ರಂಗೋಲಿ ಸುತ್ತ ದೀಪ ಹಚ್ಚಿ ಸಂಭ್ರಮಿಸಲಾಯಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now