
ಶಿರ್ವ: ಇಲ್ಲಿಯ ಸಂತ ಮೇರಿ ಕಾಲೇಜಿನ ಸಾಹಿತ್ಯ ಸಂಘ ಹಾಗೂ ಐಕ್ಯೂಎಸಿ ಇವರ ಸಹಯೋಗದೊಂದಿಗೆ ಇತ್ತೀಚೆಗೆ ಕಾಲೇಜು ವಾರ್ಷಿಕ ಸಂಚಿಕೆ “ಮಲ್ಲಿಕಾ” ಅನಾವರಣ ಕಾರ್ಯಕ್ರಮವು ಕಾಲೇಜಿನ ದೃಶ್ಯ-ಶ್ರಾವ್ಯ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿರುವ ಅಂಬಿಕಾ, ಉಪನ್ಯಾಸಕರು ಎಂ.ಜಿ.ಎಂ ಕಾಲೇಜು, ಉಡುಪಿ, ಇವರು ಮಾತನಾಡಿ ಕಾಲೇಜು ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳ ಪಾಲಿಗೆ ಅವಕಾಶಗಳ ಹೊನಲು, ವಿದ್ಯಾರ್ಥಿಗಳ ಪಠ್ಯದ ಹೊರತಾದ ಪ್ರತಿಭೆಯ ಅನಾವರಣಕ್ಕೆ ಇದೊಂದು ಒಳ್ಳೆಯ ಅವಕಾಶ, ಒಳ್ಳೆಯ ಓದುವ ಪ್ರಯತ್ನ ಮಾಡಿದರೆ ಒಬ್ಬ ಒಳ್ಳೆಯ ಬರಹಗಾರನಾಗಬಲ್ಲೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೊನಿಸ್ ರವರು ಮಾತನಾಡಿ ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಬರೆಯುವ ಆಸಕ್ತಿ ಕಡಿಮೆಯಾಗುತ್ತಿದೆ, ಕಾಲೇಜು ವಾರ್ಷಿಕ ಸಂಚಿಕೆಗಳಲ್ಲಿ ಬರೆದವರೇ ಮುಂದೆ ದೊಡ್ಡ ಬರಹಗಾರರಾದ ಇತಿಹಾಸ ಉಂಟು, ಕಾಲೇಜು ಸಂಚಿಕೆ ದಾಖಲೆಯಾಗಿ ಉಳಿಯುತ್ತದೆ, ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.
ಮುಖಪುಟ ವಿನ್ಯಾಸ ಮಾಡಿದ ಸಿಂಚನ ತೃತೀಯ ಬಿಕಾಂ ಹಾಗೂ ಕವನ ಬರೆಯುವ ಸ್ಪರ್ಧೆಯ ವಿಜೇತರಾದ ಆರ್ತಿಕ್ ತೃತೀಯ ಬಿಕಾಂ ಇವರಿಗೆ ಬಹುಮಾನವನ್ನು ನೀಡಲಾಯಿತು.
ಸಾಹಿತ್ಯ ಸಂಘದ ಸಂಯೋಜಕರು ಹಾಗೂ ವಾರ್ಷಿಕ ಸಂಚಿಕೆಯ ಸಂಪಾದಕರಾದ ಡಾ. ಗುಲಾಬಿ ಪೂಜಾರಿ ಅವರು ಸ್ವಾಗತಿಸಿ, ದ್ವಿತೀಯ ಬಿ.ಎ ವಿದ್ಯಾರ್ಥಿನಿ ಶ್ರಾವ್ಯ ಪ್ರಭು ಇವರು ಅತಿಥಿಗಳ ಪರಿಚಯ ಮಾಡಿದರು. ತೃತೀಯ ಬಿಕಾಂನ ಚೈತ್ರಿಕಾ ಕಾರ್ಯಕ್ರಮ ನಿರ್ವಹಿಸಿದರು, ಹಾಗು ಹಿಂದಿ ವಿಭಾಗದ ಮುಖ್ಯಸ್ಥರಾದ ಸಿಂತಿಯಾ ನೀಮಾ ಡಿಸೋಜರವರು ವಂದಿಸಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಜಗದೀಶ್ ಆಚಾರ್ಯ ಮತ್ತು ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now