
(7/11/2026)ಮದ್ಯಾಹ್ನ ಸರಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ (ಹೈಸ್ಕೂಲ್ ವಿಭಾಗ )ಇಲ್ಲಿ ವಿಶೇಷ ದೀಪಾವಳಿ ಆಚರಣೆ ಯನ್ನು ಹೋಂ ಡಾಕ್ಟರ್ ಫೌಂಡೇಶನ್ ಸದಸ್ಯರೂ ಮಕ್ಕಳೊಂದಿಗೆ ಸೇರಿ ಅದ್ದೂರಿ ಯಾಗಿ ಆಚರಿಸಲಾಯಿತು…ಮೊದಲು ಹಬ್ಬದ ಊಟ, ಹೋಳಿಗೆ ಪಾಯಸ ಊಟ ದೊಂದಿಗೆ 150 ಜನ ಮಕ್ಕಳು,ಅಧ್ಯಾಪಕರು ಹಾಗು ಸದಸ್ಯರು ಕಾರ್ಯಕ್ರಮ ವನ್ನು ಆರಂಭಿಸಿದರು.. ನಂತರ ಸಭಾಂಗಣ ದಲ್ಲಿ ಚಿಕ್ಕ ಸಬಾ ಕಾರ್ಯಕ್ರಮ ಒಂದು ನಡೆಸಿ ಅಲ್ಲಿ ಒಟ್ಟು 8 ಅಸಹಾಯಕ ರೋಗಿಗಳಿಗೆ ಅಂದು ಸಂಗ್ರಹಿಸಿದ ಹಣವನ್ನು ವಿತರಿಸಲಾಯಿತು…

*1)ಭಾಸ್ಕರ್ ಶೆಟ್ಟಿ(ಹೆಡ್ ಇಂಜ್ಯೂರಿ ).. 10,000
2)ಶಾರದಾ ಗಂಗೊಳ್ಳಿ(dialysis) 10,000
3)ಮಾಸ್ಟರ್ ಶರತ್(ಹೃದಯ ಸಂಬಂದಿ ).. 10,000
4) ಶಾರದಾ ಕೆ(ಕ್ಯಾನ್ಸರ್ )… 10000
5)ರಾಜೇಶ್ವರಿ(ಬೆನ್ನು ಹುರಿ ಸಮಸ್ಯೆ )… 10,000
6)ಅಮೂಲ್ಯ ಕುಂಜಾಲು(ಡೈಲಿಸಿಸ್ )15,00, ಮಹೇಶ್ ಶೆಟ್ಟಿಗಾರ್(ಕಾಲಿನ ಇನ್ಫೆಕ್ಷನ್ ).. 15,000
8)ಗೀತಾ ನೈಕ(ಬುದ್ದಿಮಾoದ್ಯ ಮಗುವಿನ ತಾಯಿ )… 10,000

ಬಳಿಕ ಹರಿದ ಬ್ಯಾಗ್ ಹಾಗು ಹರಿದ ಚಪ್ಪಲಿ ಬಳಸುತಿದ್ದ ಮಕ್ಕಳನ್ನೂ ಗುರುತಿಸಿ ತಲಾ 4,ಹೊಸ ಚಪ್ಪಲಿ ಹಾಗು ಬ್ಯಾಗ್ ಗಳನ್ನು ವಿತರಿಸಲಾಯಿತು.ನಂತರ ಸ್ವರ್ಗ ಆಶ್ರಮ ದಲ್ಲಿ ಇತ್ತೀಚಿಗೆ ನಡೆದ ಬೆಂಕಿ ರಹಿತ ಸ್ಪರ್ಧೆಯ ವಿಜೇತರಿಗೆ, ಭಗವಹಿಸಿದವರಿಗೆ ಬಹುಮಾನದ ಹಣ , ಸ್ಮರಣಿಕೆ, ಪುಸ್ತಕ, ವಿತರಿಸಲಾಯಿತು (ಹೆಚ್ಚಿನ ಬಹುಮಾನ ವಿಜೇತರು ತಮಗೆ ದೊರೆದ ಬಹುಮಾನದ ಹಣವನ್ನು ಸ್ವರ್ಗ ಆಶ್ರಮಕ್ಕೆ ಮರಳಿ ನೀಡಿದ್ದುಸಮಾಜಕ್ಕೆ ಮಾನವೀಯತೆ ಸಾರುವ ವಿಷಯ ಗಿತ್ತು ), ಇದೇ ಸಂದರ್ಭದಲ್ಲಿ ಸ್ವರ್ಗ ಆಶ್ರಮದ ಆಶ್ರಮವಾಸಿಗಳಿಗೆ 40 ವಿಶೇಷ ಬಟ್ಟಲು ಗಳನ್ನು ನೀಡಲಾಯಿತು..ಅಂದು ಮೇಸ್ತ್ರಿ ಗಳೇ ದೇವರಾಗೋಣ ಕಾನ್ಸೆಪ್ಟ್ ಅಲ್ಲಿ ನಮ್ಮೊಂದಿಗೆ ಸಹಕರಿಸಿದ 23 ಮೇಸ್ತ್ರಿ ಗಳಿಗೆ ರೂ 1 ಲಕ್ಷದ ಬಾಂಡ್ ಗಳನ್ನು ವಿತರಿಸಲಾಯಿತು,ಶಾಲೆಗೆ ಒಂದು ನೆನಪಿನ ಕಾಣಿಕೆ ಯಾಗಿ ಸ್ಯಾನಿಟರಿ ಪ್ಯಾಡ್ ಬರ್ನರ್ ಒಂದನ್ನು ನೀಡಲಾಯಿತು

…ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ವಿಜ್ ಕಾಂಪಿಟೇಷನ್ ನಡೆದು ಎಲ್ಲರನ್ನೂ ಬಹುಮಾನ ನೀಡಿ ಖುಷಿ ಪಡಿಸಲಾಯಿತು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.. ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನ ನೀಡಿ ಯಾರಿಗೂ ನಿರಾಷೆ ಆಗದ ರೀತಿಯಲ್ಲಿ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು.. ಬಳಿಕ ಕಾರ್ಕಳದ ವಿಜೇತ ಶಾಲೆಯ ವಿಶೇಷ ಚೇತನ ಮಕ್ಕಳು ಹಾಗು ಮೂಡುಬಿದರೆ ಯ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳು ತಯಾರಿಸಿದ ಹಣತೆ ಹಚ್ಚಿ ದೀಪಾವಳಿ ಆಚರಿಸಲಾಯಿತು, ಕೊನೆಯಲ್ಲಿ ಮಕ್ಕಳಿಗೆ ಹಾಗು ನೆರೆದವರಿಗೆ ಮಸಾಲೆ ಪೂರಿ ನೀಡಿ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.. ಹೋಂ ಡಾಕ್ಟರ್ ಫೌಂಡೇಶನ್ ಸಂಸ್ಥೆಯ 20 ಕ್ಕೂ ಮಿಕ್ಕಿ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ವನ್ನು ಅಸ್ವಾದಿಸಿದ್ದು ಕಾರ್ಯಕ್ರಮ ದ ವಿಶೇಷವಾಗಿತ್ತು…

*ಒಟ್ಟಲ್ಲಿ ಚೊಕ್ಕ ಯಶಸ್ವೀ ಕಾರ್ಯಕ್ರಮ ವೊಂದು ನಮ್ಮೆಲ್ಲ ನಿಸ್ವಾರ್ಥಿ ದಾನಿಗಳಾದ ನಿಮ್ಮೆಲ್ಲರ ಸಹಕಾರದೊಂದಿಗೆ, ನಿಮ್ಮೆಲ್ಲರ ಆಶಯದಂತೆ ಜೀರೋ ದುಂದು ವೆಚ್ಚ ದೊಂದಿಗೆ, ಅದ್ದೂರಿಯಾಗಿ, ಅದ್ಭುತವಾಗಿ ಮೂಡಿಬಂದಿತ್ತು…
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now