ಲಯನ್ಸ್ ಕ್ಲಬ್ ಮೂಡುಬೆಳ್ಳೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ

ಲಯನ್ಸ್ ಕ್ಲಬ್ ಮೂಡುಬೆಳ್ಳೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ
0Shares

ಮೂಡುಬೆಳ್ಳೆ, ಅ. 2: ಲಯನ್ಸ್ ಕ್ಲಬ್ ಮೂಡುಬೆಳ್ಳೆ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜನ್ಮ ಜಯಂತಿಯನ್ನು ಮೂಡುಬೆಳ್ಳೆ ಲಯನ್ಸ್ ಭವನದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಬೆಳಿಗ್ಗೆ 9 ಗಂಟೆಗೆ ಲಯನ್ಸ್ ಮತ್ತು ಲಿಯೋ ಸದಸ್ಯರು ಲಯನ್ಸ್ ಭವನದಲ್ಲಿ ಸಮಾವೇಶಗೊಂಡು, ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಲಯನ್ಸ್ ಕ್ಲಬ್ ಮೂಡುಬೆಳ್ಳೆಯ ಅಧ್ಯಕ್ಷ Ln. ವಿವೇಕ್ ಪೈ ಅವರು, ಮಹಾತ್ಮ ಗಾಂಧೀಜಿಯವರ ಜೀವನವು ದೇಶಕ್ಕಾಗಿ ಮಾಡಿದ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದೆ. ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಗಾಂಧೀಜಿಯವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಜೋನ್ ಚೇರ್‌ಪರ್ಸನ್ MJF Ln. ಲವೀನಾ ಬಾರ್ಬೋಜಾ ಮಾತನಾಡಿ, “ಲಯನ್ಸ್ ಇಂಟರ್‌ನ್ಯಾಷನಲ್‌ನ ಧ್ಯೇಯವಾಕ್ಯ ‘We Serve’. ಅದೇ ರೀತಿಯಲ್ಲಿ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನವನ್ನೇ ದೇಶದ ಸೇವೆಗೆ ಮುಡಿಪಾಗಿಟ್ಟು, ತ್ಯಾಗದ ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ಅವರು ನಮಗೆಲ್ಲ ಆದರ್ಶಪ್ರಾಯರು. ಅವರ ಜೀವನಾದರ್ಶಗಳನ್ನು ಮನಗಂಡು ನಾವು ಸಮಾಜದ ಹಾಗೂ ಅಗತ್ಯವಿರುವವರ ಸೇವೆಗೆ ಮುಂದಾಗಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ಟ್ 317C ಕ್ಯಾಲೆಂಡರ್ ಇವೆಂಟ್ಸ್ ಕೋಆರ್ಡಿನೇಟರ್ MJF Ln. ರಾಜೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಮೂಡುಬೆಳ್ಳೆಯ ಕಾರ್ಯದರ್ಶಿ Ln. ಇವಾನ್ ಮೆನೆಜಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಜಯಂತಿ ಆಚರಣೆಯ ಬಳಿಕ ಲಯನ್ಸ್ ಮತ್ತು ಲಿಯೋ ಸದಸ್ಯರು ಲಯನ್ಸ್ ಭವನದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now