ಉಪ್ಪೂರು ಪಂಚಾಯತ್ ಕೊಳಲಗಿರಿ1ನೇ ವಾರ್ಡ್ ಮೂಡು ಅಮ್ಮುಂಜೆ ಉಪೂರು ಗ್ರಾಮ ಬ್ರಹ್ಮಾವರ ತಾಲೂಕಿನ ಮೂಡು ಅಮ್ಮುಂಜೆಯಲ್ಲಿ ದಿಢೀರ್ ಕಾಣಿಸಿಕೊಂಡಿರುವ ಎರಡು ಹುಲಿಗಳಿಂದ ಸಾರ್ವಜನಿಕರಿಗಾಗಿ ರಕ್ಷಣೋಪಾಯ ಕೈಗೊಳ್ಳುವ ಕ್ರಮದ ಕುರಿತು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಉಪ್ಪೂರು ಗ್ರಾಮ ವ್ಯಾಪ್ತಿಯ ಮೂಡು ಅಮ್ಮುಂಜೆಯಲ್ಲಿ ತಾರೀಕು: 23-09-2026 ರ ಸಂಜೆ ಗಂಟೆ 7.20 ಕ್ಕೆ ಪ್ರತ್ಯಕ್ಷದರ್ಶಿಗಳಾದ ಸ್ಥಳೀಯರಿಗೆ ಕಾಣಿಸಿಕೊಂಡ ಎರಡು ಹುಲಿಗಳು ಅವುಗಳ ಘರ್ಜನೆ ಸಾರ್ವಜನಿಕರಲ್ಲಿ ಬಹಳಷ್ಟು ಭಯದ ವಾತಾವರಣ ಉಂಟಾಯಿತು. ಮೂಡು ಅಮ್ಮುಂಜೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿಯೇ ಹುಲಿಗಳೆರಡು ದಿಢೀರಾಗಿ ಕಾಣಿಸಿದ್ದರಿಂದ ಶಾಲೆಯಿಂದ ಮನೆಗೆ ಬರುವ ಶಾಲಾ ಮಕ್ಕಳು, ಕೆಲಸ ಬಿಟ್ಟು ನಡೆದು ಬರುತ್ತಿರುವ ಮಹಿಳೆಯರು, ವಾಹನ ಸವಾರರು ಆತಂಕಪಟ್ಟು ಹೆದರಿಕೊಂಡು ಓಡುವಂತಾಯಿತು. ಇಲ್ಲಿಯ ಜನರಿಗೆ ಕಾಡುಪ್ರಾಣಿಗಳಾದ ಚಿರತೆ, ಜಿಂಕೆ, ಮತ್ತು ಬಹುದೊಡ್ಡ ಸಂಖ್ಯೆಯ ಸುಮಾರು 30 ರಷ್ಟು ಇರುವ ಕಾಡು ಕೋಣಗಳ ಹಿಂಡು ಹಾವಳಿಯಿಂದ ಬಹಳಷ್ಟು ಹಾನಿ ತೊಂದರೆಗಳಿಂಗಾಗಿ ಭಯಭೀತರಾಗಿದ್ದ ಸ್ಥಳೀಯರಿಗೆ ಈಗ ಮತ್ತೊಂದು ದೊಡ್ಡ ಆತಂಕ ಅಪಾಯ ಬಂದೊದಗಿದೆ. ಬಹಳಷ್ಟು ಮನೆಗಳಲ್ಲಿ ವಾಸ್ತವ್ಯವಿದ್ದು ಜನಸಂಚಾರವಿರುವ ಈ ಪ್ರದೇಶದಲ್ಲಿ ನಿರ್ಭಯದಿಂದ ತಿರುಗಾಡುವ ಈ ಕಾಡುಪ್ರಾಣಿಗಳಿಂದಾಗುತ್ತಿರುವ ತೊಂದರೆಗೆ, ಕಷ್ಟಕ್ಕೆ ಈ ಕೂಡಲೇ ಸ್ಪಂದಿಸುವ ಅಗತ್ಯ ಆದುದರಿಂದ ಈ ಬಗ್ಗೆ ಕಾಡುಪ್ರಾಣಿಗಳನ್ನು ನಿರ್ಜನ ಪ್ರದೇಶದ ಅಭಯಾರಣ್ಯಕ್ಕೆ ತಲುಪಿಸುವಂತೆ ಕೃಷಿಕರು, ಸ್ಥಳೀಯರು ವಿನಮ್ರವಾಗಿ ಅಧಿಕಾರಿಗಳನ್ನು ವಿನಂತಿಸಿಕೊಂಡರು. ಈ ಘಟನೆಗೆ ಸಿಸಿ ಕ್ಯಾಮೆರಾದಲ್ಲಿ ಸೆರೆಹಿಡಿದ ವೀಡಿಯೋ ಸಾಕ್ಷಿಯಾಗಿದೆ.

ಗ್ರಾಮಸ್ಥರ ಮನವಿಗೆ ಕೂಡಲೇ ಸ್ಪಂದಿಸಿದ ಅರಣ್ಯ ಅಧಿಕಾರಿಗಳು ಮೂಡು ಅಮ್ಮುಂಜೆಯಲ್ಲಿ ಕಾಡುಪ್ರಾಣಿ ಎರಡು ಹುಲಿ ಸಿಕ್ಕಂತಹ ಭಯಾನಕ ಅಪಾಯವನ್ನು ತಡೆಗಟ್ಟಲು ವಲಯ ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಹಜರು ನಡೆಸಿ ಮುಂದಿನ ಕ್ರಮಕ್ಕಾಗಿ ಒತ್ತಾಯಿಸಲಾಯಿತು.. ಯಾವುದೇ ಅಪಾಯ ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕೆ ಅನುಸರಿಸುವುದಾಗಿ ಭರವಸೆ ಕೊಟ್ಟರು. ಸ್ಥಳೀಯರು ಯಾರು ಭಯಪಡಬೇಕಾಗಿಲ್ಲ .ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಗರ್ಜನೆಯನ್ನು ಕೇಳಿಕೊಂಡು ಹುಲಿ ಅಲ್ಲ ಚಿರತೆಯ ಘರ್ಷಣೆ ಎಂದು ಅಧಿಕಾರಿಗಳು ದೃಢೀಕರಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now