ಉಡುಪಿ ಮತ್ತು ಶಿರ್ವದಲ್ಲಿ ಭರ್ಜರಿ ಪೊಲೀಸ್ ಕಾರ್ಯಾಚರಣೆ: ₹16 ಲಕ್ಷಕ್ಕೂ ಅಧಿಕ ಮೌಲ್ಯದ ಮಾದಕ ವಸ್ತು, ಕಾರು ವಶ; 9 ಮಂದಿ ಆರೋಪಿಗಳ ಬಂಧನ

ಉಡುಪಿ ಮತ್ತು ಶಿರ್ವದಲ್ಲಿ ಭರ್ಜರಿ ಪೊಲೀಸ್ ಕಾರ್ಯಾಚರಣೆ: ₹16 ಲಕ್ಷಕ್ಕೂ ಅಧಿಕ ಮೌಲ್ಯದ ಮಾದಕ ವಸ್ತು, ಕಾರು ವಶ; 9 ಮಂದಿ ಆರೋಪಿಗಳ ಬಂಧನ
0Shares

ಶಿರ್ವ ಮತ್ತು ಉಡುಪಿ ನಗರ ಪೊಲೀಸ್‌ ಠಾಣೆಯ ಪೊಲೀಸರ ಕಾರ್ಯಾಚರಣೆ , ಶಿರ್ವಾ ಪೊಲೀಸ್‌ ಠಾಣೆ ಮತ್ತು ಉಡುಪಿ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯಕ್ಕೆ ಬಳಸಿದ ಕಾರುಗಳು, ನಿಷೇದಿತ ಮಾದಕ ವಸ್ತು ಹಾಗೂ ನಗದು ಸೇರಿದಂತೆ ಒಟ್ಟು ಮೌಲ್ಯ ರೂ 16,01,584 ಸೊತ್ತುಗಳ ವಶ ಹಾಗೂ 9 ಜನ ಆರೋಪಿಗಳ ಬಂಧನ

ದಿನಾಂಕ 22.09.2026 ರಂದು ಮಧ್ಯಾಹ್ನ ಸಮಯದಲ್ಲಿ ಕಾಪು ಪೊಲೀಸ್ ಠಾಣಾ ಪಿಎಸ್ಐ ಶುಭಕರ ರವರಿಗೆ ಕಾಪು ತಾಲೂಕು ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆ ಎಂಬಲ್ಲಿ ಎರಡು ಕಾರು ಒಂದು ಸ್ಕೂಟರ್ ನಲ್ಲಿ ಕೆಲವು ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೊಂದಿರುತ್ತಾರೆ ಎಂದು ಬಂದ ಖಚಿತ ಮಾಹಿತಿಯಂತೆ ಸಂಜೆ 4:35 ಗಂಟೆಗೆ ಸ್ಥಳಕ್ಕೆ ಧಾಳಿ ನಡೆಸಿದಾಗ ಆಪಾದಿತರು ತಮ್ಮ ಸ್ವಂತ ಲಾಭಕ್ಕಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ವಶದಲ್ಲಿ ಇಟ್ಟುಕೊಂಡಿರುವುದು ಕಂಡುಬಂದಿದ್ದು, ಅದರಂತೆ ಆರೋಪಿತರ ವಶದಿಂದ 1. 1354.28 ಗ್ರಾಂ ತೂಕದ ಗಾಂಜಾ (ಮೌಲ್ಯರೂ. 67,714/-),

  1. 32.74 ಗ್ರಾಂ ತೂಕದ ಮೆಥಾ ಪಿಟಾಮೈನ್ (ಮೌಲ್ಯರೂ. 1,30,960/- ),
  2. ಆಪಾದಿತರು ಕೃತ್ಯಕ್ಕೆ ಬಳಸಿದ ಕಾರು ನಂಬ್ರ KA20-MH-0764, (ಮೌಲ್ಯ ರೂ. 6,00,000/- ),
    KA-20-ME-9307 (ಮೌಲ್ಯರೂ. 4,00,000/- ),
    ಸ್ಕೂಟರ್ ನಂಬ್ರ KA20-ET-5634 (ಮೌಲ್ಯರೂ. 25,000/- ),
  3. ಆರೋಪಿತರ ಮೊಬೈಲ್ ಫೋನ್ಗಳು-9, (ಮೌಲ್ಯರೂ. 93,300/- ),
  4. ತೂಕದ ಮಿಷಿನ್-2, (ಮೌಲ್ಯ 500/- ರೂ)
  5. ನಗದುರೂ. 75,010/- ಗಳನ್ನು
    ಸ್ವಾಧೀನಪಡಿಸಿಕೊಂಡು 8 ಜನ ಆರೋಪಿತರಾದ
    1)ಅಲ್ನಾಜ್ @
    ಮೊಹಮ್ಮದ್ ಅನಾಸ್ 2)ಮಹಮ್ಮದ್ ಅಲ್ತಾಪ್ 3)ಸ್ಟ್ಯಾನಿ ಸಂದೀಪ್ 4)ಶಾಕೀಬ್
    5)ಮಹಮ್ಮದ್ ಫೈಜಲ್ 6)ಇಮ್ತಿಯಾಜ್
    7)ಅಜಯ್ ಕುಮಾರ್ 8)ಸಂತೋಷ್ ದೇವಾಡಿಗ ರವರನ್ನು ದಸ್ತಗಿರಿ ಮಾಡಿರುತ್ತಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 79/2026 ಕಲಂ: 8B, 8C, 20(b)(ii)(B), 22( c) NDPS Act 1985 ರಂತೆ ಪ್ರಕರಣ ದಾಖಲಿಸಿಕೊಂಡು, ಶಿರ್ವ ಪೊಲೀಸ್ ಠಾಣಾ ಪಿಎಸ್ಐ ಅನಿಲ್ ರವರು ತನಿಖೆಯನ್ನು ಕೈಗೊಂಡಿರುತ್ತಾರೆ. ಪ್ರಕರಣದಲ್ಲಿ ಆರೋಪಿತರು ಕೇರಳ ರಾಜ್ಯದ ಉಪ್ಪಳ ಎಂಬಲ್ಲಿಂದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಆರೋಪಿತರು ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಕೇಸ್ ಗಳನ್ನು ಹೊಂದಿದ್ದು, ಕ್ರಿಮಿನಲ್ ಚಟುವಟಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡವರಾಗಿರುತ್ತಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಪ್ರಕರಣದ ವಿವರ:
ದಿನಾಂಕ 22-09-2026 ರಂದು ಸಂಜೆ ಉಡುಪಿ ನಗರ ಪೊಲೀಸ್ ಠಾಣಾ ಪಿಎಸ್ಐ ಕಾ&ಸು ಭರತೇಶ್ ಕಂಕಣವಾಡಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮಾನ್ಯ ಪೊಲೀಸ್ ಅಧೀಕ್ಷಕರಿಗೆ ಕೋರಿಕೆ ಪತ್ರ ನೀಡಿ ಅಧಿಕಾರ ಪತ್ರವನ್ನು ಸ್ವೀಕರಿಸಿಕೊಂಡು, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಿನಾಂಕ 23/09/2026 ರಂದು 00:10 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಾದಿರಾಜ ರಸ್ತೆಯ 3ನೇ ಅಡ್ಡರಸ್ತೆಯಲ್ಲಿರುವ ಮನೆಯೊಂದಕ್ಕೆ ದಾಳಿ ನಡೆಸಿ, ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟುಕೊಂಡಿದ್ದ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಪತ್ತೆ ಮಾಡಿ, ಆರೋಪಿತನಾದ ಶ್ರೀವತ್ಸ ಕೆ.ಜಿ ಪ್ರಾಯ 31 ವರ್ಷ, ಮಣಗೋಡು ಗ್ರಾಮ, ನೆಲ್ಲಿಬೀಡು ಅಂಚೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ. ಹಾಲಿ ವಿಳಾಸ : ಶ್ರೀಮತಿ ಸುಲೇಖಾ ರವರ ಬಾಡಿಗೆ ಮನೆ, ವಾದಿರಾಜ ರಸ್ತೆ 3ಅಡ್ಡರಸ್ತೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನನ್ನು ದಸ್ತಗಿರಿ ಮಾಡಿ, ಆತನ ವಶದಿಂದ 1 ಕೆಜಿ 659.91 ಗ್ರಾಂ ಗಾಂಜಾ(ಅಂದಾಜು ಮೌಲ್ಯ :83,000/-) ಮತ್ತು ನಗದು ರೂ. 1,26,500/-, ಗಾಂಜಾ ತೂಕ ಮಾಡುವ ಡಿಜಿಟಲ್ ಸ್ಕೇಲ್-1 ಹಾಗೂ ಇತರ ಸಾಮಾಗ್ರಿಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿತನನ್ನು ದಸ್ತಗಿರಿ ಮಾಡಲಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 130/2026, ಕಲಂ: 8(c), 20(b)(ii)(B) NDPS ACT 1985 ಪ್ರಕರಣವನ್ನು ದಾಖಲಿಸಿಕೊಂಡು, ಉಡುಪಿ ನಗರ ಠಾಣ ಪಿಎಸ್ಐ ಪ್ರಕಾಶ್ ರವರು ತನಿಖೆಯನ್ನು ಕೈಗೊಂಡಿರುತ್ತಾರೆ.

ಆರೋಪಿಗಳ ವಿರುದ್ದ ಈಗಾಗಲೇ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಈ ಕೆಳಗಿನಂತೆ ಪ್ರಕರಣಗಳು ದಾಖಲಾಗಿರುತ್ತವೆ.

ಆರೋಪಿ ಸ್ಟ್ಯಾನ್ಲಿ ಸಂದೀಪ್ ಈತನ ಮೇಲೆ ಮಣಿಪಾಲ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುತ್ತದೆ.

ಮೊಹಮ್ಮದ್ ಪೈಸಲ್ ವಿರುದ್ದ ಮಲ್ಪೆ ಠಾಣೆಯಲ್ಲಿ 1 ಪ್ರಕರಣ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ 1 ಪ್ರಕರಣ ಹಾಗೂ ಮಣಿಪಾಲ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 3 ಪ್ರಕರಣಗಳು ದಾಖಲಾಗಿರುತ್ತವೆ.

ಇಮ್ತಿಯಾಜ್ ವಿರುದ್ದ ಉಡುಪಿ ನಗರ ಠಾಣೆಯಲ್ಲಿ 3 ಪ್ರಕರಣ ಬ್ರಹ್ಮಾವರ ಠಾಣೆಯಲ್ಲಿ 1 ಕೊಲೆ ಪ್ರಕರಣ , ಮಲ್ಪೆ ಠಾಣೆಯಲ್ಲಿ 1 ಪ್ರಕರಣ ಮಣಿಪಾಲದಲ್ಲಿ 3 ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣ ದಾಖಲಾಗಿರುತ್ತದೆ.

ಅಜಯ್ ಕುಮಾರ ವಿರುದ್ದ ಉಡುಪಿ ನಗರ ಠಾಣೆಯಲ್ಲಿ 1 ದರೋಡೆ ಪ್ರಕರಣ , ಮಣಿಪಾಲ ಠಾಣೆಯಲ್ಲಿ 1 ಪ್ರಕರಣ ಶಿರ್ವಾ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 3 ಪ್ರಕರಣಗಳು ದಾಖಲಾಗಿರುತ್ತವೆ.

ಆರೋಪಿ ಸಂತೋಷ ದೇವಾಡಿಗ ವಿರುದ್ದ ಉಡುಪಿ ನಗರ ಠಾಣೆಯಲ್ಲಿ 2 ಗಾಂಜಾ ಸೇವನೆ ಪ್ರಕರಣ ದಾಖಲಾಗಿರುತ್ತದೆ.

ಈ ಎರಡು ಪ್ರಕರಣದಲ್ಲಿ ಮಾದಕ ವಸ್ತುಗಳ ಪತ್ತೆ ಮಾಡಿ ಸ್ವಾಧೀನಪಡಿಸಿಕೊಳ್ಳಲು ಮತ್ತು ಆರೋಪಿತರ ದಸ್ತಗಿರಿ ಬಗ್ಗೆ ಎಎಸ್‌ಪಿ ಈಶಿತಾ ಗುಪ್ತಾ, ಬೆಳ್ಳಿಯಪ್ಪ . ಡಿವೈಎಸ್‌ಪಿ ಉಡುಪಿ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರು ಮಹೇಶ ಪ್ರಸಾದ್.ಪಿ ಮತ್ತು ಕಾಪು ವೃತ್ತ ನಿರೀಕ್ಷಕರಾದ ಅಜ್ಮತ್‌ ಅಲಿ ರವರ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡಿದ್ದು, ಶಿರ್ವ ಪೊಲೀಸ್‌ ಠಾಣಾ ಪಿಎಸ್‌ಐ ಅನಿಲ್‌, ಕಾಪು ಠಾಣಾ ಪಿಎಸ್‌ಐ ಶುಭಕರ, ಎಎಸ್‌ಐ ಸುದೇಶ್‌, ಸುಂದರಗೌಡ, ಹೆಚ್‌.ಸಿ ಮಂಜುನಾಥ, ಹರ್ಷ, ಪಿಸಿ ಯವರಾದ ಅರುಣ, ನಾಗರಾಜ, ಶರಣ, ಕಿಶೋರ ಹಾಗೂ ಸೆನ್ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಪ್ರವೀಣ, ದೀಕ್ಷೀತ್‌, ಮಣಿಪಾಲ ಪೊಲೀಸ್ ಠಾಣೆಯ ವಿಶ್ವಜಿತ್‌ ಮತ್ತು ಉಡುಪಿ ನಗರ ಪೊಲೀಸ್‌ ಠಾಣಾ ಪಿಎಸ್ಐ ಭರತೇಶ್ ಕಂಕಣವಾಡಿ, ಪಿಎಸ್‌ಐ ಪ್ರಕಾಶ್‌, ಠಾಣಾ ಸಿಬ್ಬಂದಿಯವರಾದ ಬಶೀರ್‌ ಅಹ್ಮದ್‌, ಆನಂದ ಗಾಣಿಗ ಇತರ ಸಿಬ್ಬಂದಿಯವರು ಹಾಗೂ ಸೊಕೊ ಅಧಿಕಾರಿಗಳು ತನಿಖೆಗೆ ಸಹಕರಿಸಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now