ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ದೇಹ ಪೀಸ್ ಪೀಸ್- ಪತ್ನಿ ಮೇಲೆ ಶಂಕೆ

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ದೇಹ ಪೀಸ್ ಪೀಸ್- ಪತ್ನಿ ಮೇಲೆ ಶಂಕೆ
0Shares

ಉಡುಪಿ

ದುಬೈನ ಶಾರ್ಜಾದಲ್ಲಿ ಉಡುಪಿ ಮೂಲದ ಪ್ರಕಾಶ್ ಕುಂದರ್ ದೇಹ ಕಾರಿನ ಡಿಕ್ಕಿಯಲ್ಲಿ 9 ತುಂಡುಗಳಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪ್ರಾಪ್ತ ಮಗನೊಂದಿಗೆ ಪತ್ನಿ‌ ಟೀನಾ ದುಬೈನಿಂದ ಭಾರತಕ್ಕೆ ಕದ್ದುಮುಚ್ಚಿ ಓಡಿಬಂದಿರುವ ಹಿನ್ನಲೆಯಲ್ಲಿ ಪತ್ನಿ ಹಾಗೂ ಅಪ್ರಾಪ್ತ ಮಗನ ಮೇಲೆ ಕೊಲೆ ಶಂಕೆ ವ್ಯಕ್ತವಾಗಿದೆ. ಕಳೆದ ಜುಲೈ ತಿಂಗಳಲ್ಲಿ ಈ ಬರ್ಬರ ಹತ್ಯೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ 20 ವರ್ಷಗಳ ಹಿಂದೆ ಪ್ರಕಾಶ್ ಟೀನಾ ಮದುವೆಯಾಗಿದ್ದರು. ಇವರಿಗೆ ಈಗ ಎಸ್ಸೆಸ್ಸೆಲ್ಸಿ ಓದುವ ಮಗ. ಕುಂದಾಪುರ ಮೂಲದ ಪ್ರಕಾಶ್ ಶಾರ್ಜಾ ಏರ್ಪೋರ್ಟ್ ನಲ್ಲಿ ಕೆಲಸ ಉದ್ಯಾವರ ಮೂಲದ ಪತ್ನಿ ಟೀನಾ ಶಿಕ್ಷಕಿ. ಆಗಾಗ ವಾಯ್ಸ್ ಮೆಸೆಜ್ ಮೂಲಕ ಪ್ರಕಾಶ್ ಸಹೋದರನೊಂದಿಗೆ ಸಂಪರ್ಕ. ಜುಲೈ 20ರಂದು ಸಹೋದರನನ್ನು ಸಂಪರ್ಕಿಸಲು ಪ್ರಶಾಂತ್ ಕುಂದರ್ ಪ್ರಯತ್ನಿಸಿದ್ದರು. ಯಾವತ್ತು ವಾಯ್ಸ್ ಮೆಸೆಜ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದ ಪ್ರಕಾಶ್ ಮೃತ ಪಟ್ಟ ಬಳಿಕ ಪ್ರಕಾಶ್ ಮೊಬೈಲ್ ನಿಂದ ಟೆಕ್ಸ್ಟ್ ಮೆಸೆಜ್ ಬಂದಿದೆ. ಹೀಗಾಗಿ ಸಹೋದರ ಪ್ರಶಾಂತ್ ಅವರಿಗೆ ಅನುಮಾನ ಶುರುವಾಗಿ ಕರೆ ಮಾಡುವಂತೆ ಒತ್ತಾಯಿಸಿದಾಗ ಸಂಪರ್ಕವೇ ಕಡಿತಗೊಂಡಿದೆ. ಕೂಡಲೇ ಮತ್ತೋರ್ವ ಸಹೋದರ ಮೂಲಕ ಪ್ರಕಾಶ್ ಕೆಲಸ ಮಾಡುತ್ತಿದ್ದ ಶಾರ್ಜಾ ಏರ್ಪೋರ್ಟ್ ನಲ್ಲಿ ವಿಚಾರಿಸಿದಾಗ ಪ್ರಕಾಶ್ ಭಾರತಕ್ಕೆ ಹೋಗಿರುವುದಾಗಿ ಕಂಪೆನಿ‌ ಉತ್ತರಿಸಿದೆ
. ಇನ್ನೊಂದೆಡೆ ಶಾರ್ಜಾದಲ್ಲಿ ಪ್ರಕರಣ ದಾಖಲಾದ ಬಳಿಕ ಅಲ್ಲಿನ ಪೊಲೀಸರು ಪ್ರಕಾಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾಗ ತನ್ನದೇ ಕಾರಿನ ಡಿಕ್ಕಿಯಲ್ಲಿ ಪ್ರಕಾಶ್ ದೇಹಕ್ಕೆ ಚಾಕು ಇರಿದು ಒಂಬತ್ತು ತುಂಡುಗಳಾಗಿ ಇಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೀಗಾಗಿ ಪ್ರಕಾಶ್ ಕುಟುಂಬಸ್ಥರು ಪತ್ನಿ ಟೀನಾ ಹಾಗೂ ಪುತ್ರನ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತರು ಪ್ರಕಾಶ್ ಎಂದು ಡಿಎನ್ ಎ ಪರೀಕ್ಷೆ ಮೂಲಕ ಸಾಬೀತಾಗಿದೆ. ‌ಇನ್ನು‌‌ ಸಿಸಿಟಿವಿಯಲ್ಲಿ ಓರ್ವ ಮಹಿಳೆ ಇಬ್ಬರು ಪುರುಷರು ಚೀಲ ತರುವುದು ಸೆರೆಯಾಗಿದೆ. ಪತ್ನಿ ಟೀನಾಳಿಗೆ ಪಾಕಿಸ್ತಾನಿ ಪ್ರಜೆ ಜೊತೆ ಅಕ್ರಮ ಸಂಬಂಧ ಇರುವ ಕಾರಣ ಪುತ್ರ, ಪಾಕಿಸ್ತಾನಿ ಪ್ರಿಯಕರ ಜೊತೆ ಸೇರಿ ಕೊಲೆ ಮಾಡಿರುವ ಅನುಮಾನ ದಟ್ಟವಾಗಿದೆ. ಪ್ರಕಾಶ್ ಮೃತದೇಹ ಬರುವಿಕೆಗಾಗಿ‌ ಕುಟುಂಬ ಕಾಯುತ್ತಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now