
ಉಡುಪಿ: ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ವಾರ್ಷಿಕವಾಗಿ ಆಯೋಜಿಸಲಾಗುವ ‘ಗುರು ನಮನ’ ಸಮಾರಂಭದಲ್ಲಿ ನೀಡಲಾಗುವ 2026ನೇ ಸಾಲಿನ ಶಿಕ್ಷಣ ಸೇವಾ ರತ್ನ’ ಪ್ರಶಸ್ತಿಯನ್ನು
ಯುವ ಸಾಹಿತಿ, ಬ್ರಹ್ಮಾವರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕೋಶಾಧಿಕಾರಿ , ಹೆಮ್ಮಾಡಿ ಜನತಾ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಅಲ್ತಾರು ನಾಗರಾಜ್ ಅವರ ಶಿಕ್ಷಣ, ಸಾಹಿತ್ಯ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಹಿಂದೆ ಇವರು 2015ನೇ ಸಾಲಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು, ಕುಂದ ಪ್ರಭ ಟ್ರಸ್ಟ್ ಕುಂದಾಪುರ ಇವರು ಕೊಡಮಾಡುವ ಶ್ರೇಷ್ಠ ಯುವ ಕವಿ ಪ್ರಶಸ್ತಿ ಹಾಗೂ ರೋಟರಿ ಸಂಸ್ಥೆ ಕೊಡಮಾಡುವ ನೇಶನ್ ಬಿಲ್ಡರ್ ಆವಾರ್ಡ್ ಪಡೆದಿರುತ್ತಾರೆ.
ಸೆಪ್ಟೆಂಬರ್ 20, ಭಾನುವಾರ ಬೆಂಗಳೂರು ಟೌನ್‌ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯಾಧ್ಯಕ್ಷ ಎಸ್ ರಾಮಸ್ವಾಮಿ,ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್ ಜಿ ಸೇರಿದಂತೆ ಅತಿಥಿ ಗಣ್ಯರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now