
ಎಂ.ಸಿ.ಸಿ. ಬ್ಯಾಂಕ್ ಲಿ. 2025-26ನೇ ಸಾಲಿನಲ್ಲಿ ರೂ. 10.07 ಕೋಟಿ ನಿವ್ವಳ ಲಾಭ ದಾಖಲಿಸಿದ್ದು, ಬ್ಯಾಂಕಿನ 108ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಿಗೆ 10% ಡಿವಿಡೆಂಡ್ ಘೋಷಿಸಲಾಯಿತು.

ಬ್ಯಾಂಕಿನ 108ನೇ ವಾರ್ಷಿಕ ಮಹಾಸಭೆಯು 20 ಸೆಪ್ಟೆಂಬರ್ 2026ರ ಭಾನುವಾರದಂದು ಬೆಳಿಗ್ಗೆ 11.00 ಗಂಟೆಗೆ ಲೊಯೊಲಾ ಆಡಿಟೋರಿಯಂ, ಸಂತ ಅಲೋಶಿಯಸ್ ಪಿ.ಯು. ಕಾಲೇಜು, ಕೊಡಿಯಾಲಬೈಲ್, ಮಂಗಳೂರು ಇಲ್ಲಿ ನಡೆಯಿತು. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯ ಆರಂಭದಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರೊಂದಿಗೆ ವಿಶೇಷ ಆಹ್ವಾನಿತರು ಹಾಗೂ ಗಣ್ಯರು ನೆರವೇರಿಸಿದರು. ಇವರಲ್ಲಿ ಶ್ರೀ ಎಂ.ಪಿ. ನೊರೊನ್ನ ಎಂ.ಸಿ.ಸಿ. ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ವಕೀಲರು; ಶ್ರೀ ರೋಹನ್ ಮೊಂತೆರೋ, ವ್ಯವಸ್ಥಾಪಕ ನಿರ್ದೇಶಕರು, ರೋಹನ್ ಕಾರ್ಪೊರೇಶನ್; ಶ್ರೀ ಸಂತೋಷ್ ಡಿಸೋಜ, ಅಧ್ಯಕ್ಷರು, ಕಥೋಲಿಕ್ ಸಭಾ ಮಂಗಳೂರು, ಶ್ರೀ ಆಲ್ವಿನ್ ಕ್ವಾಡ್ರಸ್, ಅಧ್ಯಕ್ಷರು, ಆಲ್ ಇಂಡಿಯಾ ಕ್ಯಾಥೋಲಿಕ್ ಯುನಿಯನ್, ಕರ್ನಾಟಕ ರಾಜ್ಯ ಹಾಗೂ ಶ್ರೀ ರೋನಾಲ್ಡ್ ಗೋಮ್ಸ್, ಅಧ್ಯಕ್ಷರು, ಕ್ಯಾಥೋಲಿಕ್ ಅಸೋಸಿಯಶನ್ ಅಫ್ ಸೌತ್ ಕೆನರಾ ಉಪಸ್ಥಿತರಿದ್ದರು.

ನಂತರ ಬ್ಯಾಂಕಿನ ಸ್ಥಾಪಕರಾದ ಶ್ರೀ ಪಿ.ಎಫ್. ಎಕ್ಸ್ ಸಲ್ತಾನ್ಹಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಬ್ಯಾಂಕಿನ ಸದೃಢ ಹಣಕಾಸು ಪ್ರಗತಿಯನ್ನು ವಿವರಿಸಿದರು. 2025-26ನೇ ಸಾಲಿನಲ್ಲಿ ಬ್ಯಾಂಕ್ ರೂ. 10.07 ಕೋಟಿ ನಿವ್ವಳ ಲಾಭ ಗಳಿಸಿದ್ದು, ಠೇವಣಿಗಳು ರೂ. 872.88 ಕೋಟಿ, ಸುಮಾರು 24% ಬೆಳವಣಿಗೆಯೊಂದಿಗೆ; ಮುಂಗಡಗಳು ರೂ. 652.06 ಕೋಟಿ, ಸುಮಾರು 22% ಬೆಳವಣಿಗೆಯೊಂದಿಗೆ; ಹಾಗೂ ಕಾರ್ಯನಿರತ ಬಂಡವಾಳ ರೂ. 1,008 ಕೋಟಿ, ಸುಮಾರು 22% ಬೆಳವಣಿಗೆಯೊಂದಿಗೆ ತಲುಪಿದೆ ಎಂದು ತಿಳಿಸಿದರು. ಬ್ಯಾಂಕಿನ ಷೇರು ಬಂಡವಾಳ ರೂ. 34.08 ಕೋಟಿ ಇದ್ದು, ನಿವ್ವಳ NPA 1.26%, Provision Coverage Ratio 68.34%, Return on Assets (ROA) 1.00% क 31 2026ರಂತೆ CRAR 16.53% ರಷ್ಟಿದೆ ಎಂದು ಅವರು ತಿಳಿಸಿದರು. ಬ್ಯಾಂಕಿನ ಒಟ್ಟು ವ್ಯವಹಾರವು ರೂ. 1525 ಕೋಟಿಯನ್ನು ಮೀರಿದೆ ಎಂದರು.

ಸದಸ್ಯರಿಗೆ ಶೇಕಡಾ 10 ಡಿವಿಡೆಂಡ್ ಘೋಷಿಸಲಾಯಿತು. ಲಾಭ ವಿಂಗಡನೆಯನ್ನು ಮಾಡಿ ಸಹಕಾರ ಶಿಕ್ಷಣ ನಿಧಿಗೆ ರೂ. 22,66 ಲಕ್ಷವನ್ನು ಕಾದಿರಿಸಲಾಯಿತು.

2018ನೇ ಸಾಲಿನ ನಿರ್ದೇಶಕರ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಸ್ಮರಿಸಿದ ಅಧ್ಯಕ್ಷರು, ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗಿದ್ದು, ಕಳೆದ 8 ವರ್ಷಗಳಲ್ಲಿ ಬ್ಯಾಂಕ್ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು. ಬ್ಯಾಂಕಿನ ಪುನರುಜೀವನಕ್ಕಾಗಿ ಆಡಳಿತ ಮಂಡಳಿಯ ಅಚಲ ಸಂಕಲ್ಪ ಮತ್ತು ಸತತ ಪರಿಶ್ರಮ, ಸದಸ್ಯರು ಹಾಗೂ ಸಿಬ್ಬಂದಿಯ ನಿರಂತರ ಬೆಂಬಲವೇ ಪ್ರಮುಖ ಕಾರಣವೆಂದು ಅವರು ಹೇಳಿದರು. ಬ್ಯಾಂಕ್ “Double-Engine” ಆಡಳಿತ ವ್ಯವಸ್ಥೆಯಡಿ, Reserve Bank of India ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ಕಾರ್ಯನಿರ್ವಹಣೆಯಲ್ಲಿ ವಿವಿಧ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಎಂದರು. State Co-operative Departmentri

ಬ್ಯಾಂಕಿನ ಸ್ಥಾಪಕ ನಾಯಕರ ದೂರದೃಷ್ಟಿ ಮತ್ತು ಸೇವೆಯನ್ನು ಸ್ಮರಿಸಿದ ಅವರು, ಅವರ ಪರಂಪರೆಯನ್ನು ಮುಂದುವರಿಸಿ ಬ್ಯಾಂಕನ್ನು ಆರ್ಥಿಕವಾಗಿ ಸದೃಢ ಹಾಗೂ ಸುಸ್ಥಿರ ಸಹಕಾರಿ ಬ್ಯಾಂಕ್ ಆಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸದಸ್ಯರು ಬ್ಯಾಂಕಿನೊಂದಿಗೆ ನಿಷ್ಠೆಯಿಂದ ಮುಂದುವರಿಯುವಂತೆ ಹಾಗೂ ಪರಿಶೀಲಿಸದ ಮಾಹಿತಿ ಅಥವಾ ವದಂತಿಗಳನ್ನು ನಂಬದೆ








Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now