
ವಾಲ್ಪಾಡಿಯ ಬೌತಿಸ್ ಮತ್ತು ಬೇಬಿ ರಾಡ್ರಿಗಸ್ ದಂಪತಿಯ ನೂತನ ಗೃಹ ‘ಸಂಗಾತ್’ನ ಹಸ್ತಾಂತರ ಹಾಗೂ ಗೃಹ ಪ್ರವೇಶ ಕಾರ್ಯಕ್ರಮ ಭಾನುವಾರ ನೆರವೇರಿತು.

ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ಧರ್ಮಗುರು ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ಮನೆ ಹಸ್ತಾಂತರ ನೆರವೇರಿಸಿ ಮಾತನಾಡಿ, ‘ಸಂಗಾತ್’ ಎಂಬ ಹೆಸರಿನ ಮನೆ ಬಡ ಕುಟುಂಬವೊಂದಕ್ಕೆ ದೊರೆತಿರುವುದು ಸಂತೋಷದ ಸಂಗತಿ ಎಂದರು. ಮನೆ ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಯಾಗಿದ್ದು, ಹಲವು ಒಳ್ಳೆಯ ಮನಸ್ಸಿನ ಜನರ ಸಹಕಾರ ಹಾಗೂ ದೇವರ ಆಶೀರ್ವಾದದಿಂದ ಈ ಮನೆ ನಿರ್ಮಾಣವಾಗಿದೆ ಎಂದು ಹೇಳಿದರು.

ಕೇರ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅನಿಲ್ ಮೆಂಡೋನ್ಸಾ ಪ್ರಾಸ್ತಾವಿಕವಾಗಿ ಮಾತನಾಡಿ, ಬಡವರಿಗೆ ಮನೆ ಕಟ್ಟಿಕೊಡುವ ಯೋಜನೆಯು ಸರ್ವಧರ್ಮದ ದೇವರ ಅನುಗ್ರಹ ಹಾಗೂ ದಾನಿಗಳ ಸಹಕಾರದಿಂದ 12 ಮನೆಗಳನ್ನು ಕಟ್ಟಿಕೊಡುವತ್ತ ಸಾಗಿದೆ ಎಂದರು. ಸಮಾಜಸೇವೆಯ ಒಳ್ಳೆಯ ಉದ್ದೇಶದಿಂದ ಯೋಜನೆ ಹಮ್ಮಿಕೊಂಡು ಮುನ್ನಡೆಯುತ್ತಿರುವಾಗ ಟೀಕೆಗಳು ಬರುವುದು ಸಹಜ. ಅವುಗಳನ್ನು ಮೀರಿ ಮತ್ತಷ್ಟು ಕುಟುಂಬಗಳಿಗೆ ಆಸರೆಯಾಗುವುದೇ ನಮ್ಮಧೇಯ ಎಂದು ಹೇಳಿದರು.

ಉದ್ಯಮಿ ವಿಲ್ಸನ್ ಫೆರ್ನಾಂಡಿಸ್, ರಾಜಕೀಯ ಮುಖಂಡ ಜಗದೀಶ್ ಅಧಿಕಾರಿ, ಕ್ರೈಸ್ತ ವಾರ್ಡ್ ಗುರಿಕಾರ ಉದಯ್ ಪಿಂಟೊ, ಯೂಟ್ಯೂಬರ್ ವಿಖಿಲ್ ಸಾಲ್ಯಾನ್, ಯೂಟ್ಯೂಬರ್ ಲೀಸಾ ಹಾಗೂ ಸಮಾಜ ಸೇವಕಿ ರಜನಿ ಶೆಟ್ಟಿ ಉಪಸ್ಥಿತರಿದ್ದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.
ರೋಜಿನ್ ರೊಡ್ರಿಗಸ್ ವಂದಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now