*” ಬಾಕ್ಸಿಂಗ್ ಕಣದಲ್ಲಿ ಜನತಾ ವಿದ್ಯಾರ್ಥಿಗಳ ಭರ್ಜರಿ ಚಿನ್ನದ ಬೇಟೆ” – *ದಾಖಲೆಯ 16 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ*

*” ಬಾಕ್ಸಿಂಗ್ ಕಣದಲ್ಲಿ ಜನತಾ ವಿದ್ಯಾರ್ಥಿಗಳ ಭರ್ಜರಿ ಚಿನ್ನದ ಬೇಟೆ” – *ದಾಖಲೆಯ 16 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ*
0Shares

ಕಿರಿಮಂಜೇಶ್ವರ, ಸೆಪ್ಟೆಂಬರ್ 19:
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಜಿಲ್ಲಾಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ 16 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಬೇಟೆಯೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಗೊಂಡು ದಾಖಲೆಯ ಹೊಸ ಭಾಷ್ಯ ಬರೆದಿದ್ದಾರೆ.

*17ರ ವಯೋಮಾನದ ಬಾಲಕರ ವಿಭಾಗದಲ್ಲಿ ಅನ್ವೇಷಣ್, ಪ್ರದ್ವಿನ್, ನಿಹಾನ್ ಮತ್ತು ಡೆಲ್ವಿನ್ ಹಾಗೂ ಬಾಲಕಿಯರ ವಿಭಾಗದಲ್ಲಿ ಶರಣ್ಯ, ಕೀರ್ತನಾ, ಚಾರ್ವಿ, ಆಯುಷಿ, ಅನಿಷ್ಕಾ ಮತ್ತು ಸಾನಿಧ್ಯಾ ಪ್ರಥಮ ಸ್ಥಾನ ಗಳಿಸಿದರು.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಸಚಿದ್, ರಿತ್ವಿಕ್, ಪ್ರತಿಕ್, ಆಯುಷ್, ಯಶ್ವಿನ್ ಮತ್ತು ಸಾತ್ವಿಕ್ ಪ್ರಥಮ ಸ್ಥಾನ ಸಹಿತ ಚಿನ್ನದ ಪದಕದೊಂದಿಗೆ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಗೆ ಆಯ್ಕೆಗೊಂಡರು.
ಜನತಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಉತ್ತೇಜನ, ಪ್ರತಿನಿತ್ಯದ ಕಟ್ಟುನಿಟ್ಟಿನ ತರಬೇತಿ ತರಗತಿಗಳು, ವಿದ್ಯಾರ್ಥಿಗಳು ಮತ್ತು ತರಬೇತುದಾರರ ನಿರಂತರ ಪರಿಶ್ರಮದಿಂದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯು ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಈಗಾಗಲೇ ಭರ್ಜರಿ ಜಯಭೇರಿ ಬಾರಿಸುತ್ತ ಹೊಸ ಹೊಸ ಸಾಧನೆಗಳಿಗೆ ಸಾಕ್ಷಿಯಾಗಿ ನಿಂತಿದೆ.
ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅಮೋಘ ಜಯದೊಂದಿಗೆ ಸಂಸ್ಥೆಗೆ ಕೀರ್ತಿ ತಂದ ವಿಜೇತ ವಿದ್ಯಾರ್ಥಿಗಳಿಗೆ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರು , ಕಾರ್ಯದರ್ಶಿಗಳು,ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕರು ಬೋಧಕ/ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now