ಹಿರಿಯ ಸಮಾಜ ಸೇವಕ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬ್ ನಿಧನ..!

ಹಿರಿಯ ಸಮಾಜ ಸೇವಕ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬ್ ನಿಧನ..!
0Shares

ಉಡುಪಿ: ಹಿರಿಯ ಸಮಾಜ ಸೇವಕ, ಉದ್ಯಮಿ ಹಾಗೂ ವಿವಿಧ ಧಾರ್ಮಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬರು ನಿಧನರಾಗಿದ್ದಾರೆ .

1937ರ ನವೆಂಬರ್ 6ರಂದು ತೋನ್ಸೆ ಬೆಂಗ್ರೆಯಲ್ಲಿ ಜನಿಸಿದ ಅವರು, ಕತಾರ್‌ನ ದೋಹಾದಲ್ಲಿ ಸುಮಾರು 30 ವರ್ಷಗಳ ಕಾಲ ವಾಣಿಜ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.

2001ರಲ್ಲಿ ಉಡುಪಿಗೆ ಮರಳಿದ ಬಳಿಕ ಉಡುಪಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಸುಮಾರು 9 ವರ್ಷ ಸೇವೆ ಸಲ್ಲಿಸಿದ್ದರು. ಉಡುಪಿ ಜಾಮಿಯಾ ಮಸೀದಿ ಹಾಗೂ ಕೋಡಿಬೆಂಗ್ರೆ ಜಾಮಿಯಾ ಮಸೀದಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಸಮಾಜ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಅವರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.l

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now