
ಆರೋಗ್ಯ ಸಂಬಂಧಿತ ವಿಶೇಷ ವರದಿ : ಯಾವುದೇ ಕಾರಣಕ್ಕೂ ದೈತ್ಯ ಬಸವನ ಹುಳುಗಳ ಹತ್ತಿರ ಹೋಗಬೇಡಿ ಎಂಬ ಖಡಕ್ ವಾರ್ನಿಂಗ್ ತಜ್ಞರಿಂದ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಹೆದರದಿರಿ, ಬದಲಾಗಿ ಎಚ್ಚೆತ್ತು ಜಾಗೃತರಾಗಿ ಇರುವಂತೆ ಮಾಹಿತಿ ಬಂದಿದೆ.
ಈ ವರದಿಯ ಪ್ರಕಾರ ಬಂದ ಪ್ರಮುಖ ಮುಖ್ಯಾಂಶಗಳು : ಬಸವನ ಹುಳು ಲೋಳೆಯ ಸಂಪರ್ಕದಿಂದ ಸೋಂಕಿನ ಅಪಾಯ ಮೆದುಳಿನ ಪೊರೆಯ ಉರಿಯೂತ ಬರುತ್ತೆ. ಎಚ್ಚರ..!
ತೀವ್ರ ತಲೆನೋವು, ವಾಂತಿ, ಜ್ವರ ಪ್ರಮುಖ ಲಕ್ಷಣಗಳು.
ಮನೆ-ಕೈತೋಟಗಳಲ್ಲಿ ಬಸವನ ಹುಳುಗಳ ಹಾವಳಿಯನ್ನು ನಿಯಂತ್ರಿಸಿ.
ಯಾವುದೇ ಹಣ್ಣು ತರಕಾರಿ ತಿನ್ನುವ ಮೊದಲು ಸರಿಯಾಗಿ ತೊಳೆಯಿರಿ.
ಆಫ್ರಿಕನ್ ದೈತ್ಯ ಬಸವನ ಹುಳುಗಳು ( Giant Snails ) ಕಂಡುಬರುವಂತಹ ಪ್ರದೇಶದ ಜನರು ಅವುಗಳನ್ನು ಕೈಯಿಂದ ಮುಟ್ಟದೇ ಆದಷ್ಟು ದೂರ ಇರುವಂತೆ ಎಚ್ಚರಿಕೆ ವಹಿಸಬೇಕಿದೆ. ಬಸವನ ಹುಳುಗಳು ಸವಿಸುವ ಲೋಳೆಯ ಸಂಪರ್ಕದಿಂದ ಮೆನಿಂಜೈಟಿಸಗೆ ಕಾರಣವಾಗುವ ಲಾರ್ವಾ ದೇಹ ಪ್ರವೇಶಿಸುವ ಸಾಧ್ಯತೆ ಇದೆ. ಇದರಿಂದ ಚಿಕ್ಕ ಮಕ್ಕಳು ಹೆಚ್ಚು ಅಪಾಯಕ್ಕೆ ಒಳಗಾಗಬಹುದು. ತೀವ್ರ ಜ್ವರ, ವಾಂತಿ, ತಲೆನೋವು ಬಂದರೆ ತಕ್ಷಣ ವೈಧ್ಯರನ್ನು ಸಂಪರ್ಕಿಸಬೇಕು ಎಂದು ತಜ್ಱರು ಸೂಚಿಸಿದ್ದಾರೆ.
ಬಸವನ ಹಳುಗಳ ಹಾವಳಿಯಿಂದ ಮನುಷ್ಯನ ಆರೋಗ್ಯಕ್ಕೆ ಅಪಾಯ ಉಂಟು ಮಾಡುವುದರ ಜತೆಗೆ ಕೃಷಿ, ಮನೆಯ ಕೈ ತೋಟಗಳಿಗೂ ಸಹ ಹಾನಿ ಉಂಟಾಗುತ್ತಿದೆ. ಬಸವನ ಹುಳುಗಳ ಸಂಪರ್ಕದಿಂದ ತುರಿಕೆ ಹಾಗೂ ಸೋಂಕು ಉಂಟಾಗುವ ಸಾಧ್ಯತೆ ಕೂಡ ಇದೆ.
ಬಸವನ ಹುಳುಗಳು ಸ್ರವಿಸುವ ಲಾರ್ವಾಗಳು ರಕ್ತನಾಳದ ಮೂಲಕ ಚಲಿಸಿ ಮಿದುಳು ಮತ್ತು ಅದರ ಸುತ್ತಲಿನ ಭಾಗಗಳಲ್ಲಿ ಉರಿಯೂತವನ್ನು ಉಂಟು ಮಾಡುತ್ತವೆ. ತೀವ್ರ ಜ್ವರ, ತಲೆನೋವು ಮತ್ತು ವಾಂತಿ ಆಗುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.
ಈ ಸೋಂಕಿಗೆ ಎಲೆಗಳಲ್ಲಿ ಕಂಡುಬರುವ ರ್ಯಾಟ್ ಲಂಗ್ವೊರ್ಮ್ ಎಂಬ ಪರಾವಲಂಬಿ ಜೀವಿ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಇಲಿಗಳಲ್ಲಿ ಕಂಡುಬರುತ್ತದೆ. ಇಲಿಗಳ ಮಲವನ್ನು ಸೇವಿಸುವುದರಿಂದ ಈ ಪರಾವಲಂಬಿ ಜೀವಿ ಬಸವನ ಹುಳುಗಳಿಗೆ ಸೋಂಕು ತಗಲುತ್ತದೆ. ಇದು ಮಾನವ ಸಂಪರ್ಕಕ್ಕೆ ಬಂದರೆ, ಅವರಿಗೂ ಸೋಂಕು ತಗುಲುವ ಹೆಚ್ಚಿನ ಅಪಾಯ ಇರುತ್ತದೆ. ಈ ಆಫ್ರಿಕನ್ ದೈತ್ಯ ಬಸವನ ಹುಳುಗಳು ಕೇವಲ ಮನುಷ್ಯರಿಗಲ್ಲದೆ, ಮನೆಯ ಕೈತೋಟ, ತರಕಾರಿ ಹಾಗೂ ಬೆಳೆಗಳಿಗೂ ವ್ಯಾಪಕವಾಗಿ ಹಾನಿಯನ್ನುಂಟು ಮಾಡುತ್ತವೆ.
ಮುನ್ನೆಚ್ಚರಿಕೆ ಕ್ರಮಗಳೇನು?
- ಕೈಗೆ ಗ್ಲೌಸ್ಗಳನ್ನು ಧರಿಸದೆ ಬಸವನ ಹುಳುಗಳನ್ನು ಮುಟ್ಟಬೇಡಿ. ಉಪ್ಪು ಮತ್ತು ತಾಮ್ರದ ಸಲ್ಫೆಟ್ ದ್ರಾವಣ ಬಳಸಿ ಅವುಗಳನ್ನು ದೂರ ಇಡಬಹುದು. ಇಲಿಗಳ ಸಂತಾನೋತ್ಪತ್ತಿ ಹೆಚ್ಚಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.
- ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.
- ಬಸವನ ಹುಳುಗಳನ್ನು ಕೊಲ್ಲುವುದರಿಂದ ಸಮಸ್ಸೆ ಪರಿಹಾರವಾಗುವುದಿಲ್ಲ, ಅವುಗಳ ಮೊಟ್ಟೆ ದೀರ್ಘಕಾಲ ಮಣ್ಣಿನೊಳಗೆ ಸುರಕ್ಷಿತವಾಗಿ ಉಳಿಯಬಹುದು. ಒಂದು ಬಸವನ ಹುಳು ಒಂದು ಬಾರಿಗೆ ಸುಮಾರು 500 ಮೊಟ್ಟೆಗಳನ್ನ ಇಡಬಹುದು.
. ತರಕಾರಿ ಹಾಗೂ ಇತರ ಪದಾರ್ಥ ಸೇವಿಸುವ ಮೊದಲು ಚನ್ನಾಗಿ ತೊಳೆಯಬೇಕು.
ಬಸವನ ಹುಳುಗಳನ್ನು ನಿಯಂತ್ರಿಸುವುದು ಹೇಗೆ?
ಮಣ್ಣಿನಲ್ಲಿ ಸುಮಾರು ಒಂದೂವರೆ ಆಳದ ಗುಂಡಿ ತೋಡಿ, ಅನಾಸಸ್ ಹಾಗೂ ಈಸ್ಟ್ ಅನ್ನು ಗುಂಡಿ ಒಳಗೆ ಹಾಕಬೇಕು. ಅದರ ವಾಸನೆಗೆ ಬಸವನ ಹುಳುಗಳು ಆಕರ್ಷಿತವಾಗಿ ಬಂದಾಗ ಅವುಗಳ ಮೇಲೆ ಉಪ್ಪಿನ ದ್ರಾವಣವನ್ನು ಸಿಂಪಡಿಸಬೇಕು. ಇದಾದ ನಂತರ ಗುಂಡಿಯನ್ನು ಮುಚ್ಚಬೇಕು.
ಬಸವನ ಹುಳು ಹಾಗೂ ಇಲಿ ಇವೆರಡನ್ನು ದೂರ ಇಡುವುದು ತುಂಬಾ ಮುಖ್ಯ. ಯಾರಿಗಾದರು ಸೊಂಕಿನ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು ಎಂದು ತಜ್ಞರು ಹೇಳಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now