ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 1.47 ಕೋಟಿ ರೂ. ಲಾಭ; ಶೇ.13 ಡಿವಿಡೆಂಡ್ ಘೋಷಣೆ.!

ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 1.47 ಕೋಟಿ ರೂ. ಲಾಭ; ಶೇ.13 ಡಿವಿಡೆಂಡ್ ಘೋಷಣೆ.!
0Shares

ವಿಟ್ಲ: ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 2025-26 2 238.99 3 . ಮಿಕ್ಕಿ ವ್ಯವಹಾರ ನಡೆಸಿದ್ದು, ಸುಮಾರು 1.47 ಕೋಟಿ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.13 ಡಿವಿಡೆಂಡ್ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಎನ್‌. ಹೇಳಿದರು.

ಅವರು ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

2025-26ನೇ ಸಾಲಿನಲ್ಲಿ 121 ಮಂದಿ ಸದಸ್ಯರಾಗಿ ಸೇರ್ಪಡೆಯಾಗಿದ್ದು, 18.34ಲಕ್ಷ ರೂ. ಪಾಲು ಬಂಡವಾಳವಿದೆ. ಪ್ರಸಕ್ತ ವರ್ಷದಲ್ಲಿ 5511 ಎ ತರಗತಿ ಸದಸ್ಯರಿದ್ದು, 3.90ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 39.60ಕೋಟಿ ಠೇವಣಾತಿಯನ್ನು ಹೊಂದಿ ಶೇ.9.76 ಹೆಚ್ಚಳವಾಗಿದೆ. 39.25ಕೋಟಿ ಕೃಷಿ ಹಾಗೂ ಕೃಷಿಯೇತರ ಸಾಲ ನೀಡಿದ್ದು, ಶೇ.96.41ರಷ್ಟು ವಸೂಲಿ ಮಾಡಲಾಗಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘ ಎ ತರಗತಿಯನ್ನು ಹೊಂದಿದೆ. ವಿಟ್ಲ ಪ್ರಧಾನ ಕಚೇರಿ ಮತ್ತು ಕುಂಡಡ್ಕ ಶಾಖೆಯಲ್ಲಿ ನಡೆದ ವ್ಯಾಪಾರದಲ್ಲಿ ರೂ.12.32 ಲಕ್ಷ ಲಾಭ ಬಂದಿದೆ ಎ೦ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now