
ರೋಟರಿ ಜಿಲ್ಲೆ 3182 ರ 2025-26 ಪ್ರತಿಷ್ಠಿತ ಜಿಲ್ಲಾ ಪ್ರಶಸ್ತಿಗಳ (District Awards)ಗಳಲ್ಲಿ ಲಾರ್ಜ್ ಕ್ಲಬ್ ವಿಭಾಗದಲ್ಲಿ ರೋಟರಿ ಕ್ಲಬ್ ಬ್ರಹ್ಮಾವರ ಸಂಸ್ಥೆಯು ಅತ್ಯುತ್ತಮ ಸಾಧನೆ ತೋರಿ ವಿವಿಧ ಸೇವಾ ವಿಭಾಗಗಳಲ್ಲಿ 28 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಶ್ರೇಷ್ಠ ಕ್ಲಬ್ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದೆ
ಕ್ಲಬ್‌ನ ಸಕ್ರಿಯ ಸೇವಾ ಯೋಜನೆಗಳು ಮತ್ತು ಸಾಮಾಜಿಕ ಕಳಕಳಿಯನ್ನು ಪರಿಗಣಿಸಿ ಒಟ್ಟು 24ಕ್ಕೂ ಹೆಚ್ಚು ವಿಭಾಗಗಳಲ್ಲಿ ಅತ್ಯುನ್ನತ ಬಹುಮಾನ ಹಾಗೂ ಮನ್ನಣೆ ಲಭಿಸಿದೆ.
ಮುಖ್ಯ ಸಾಧನೆಗಳು ಮತ್ತು ಪ್ರಶಸ್ತಿಗಳ ವಿವರ:
ಸರ್ವತೋಮುಖ ಸೇವೆ: ಎಲ್ಲಾ ಸೇವಾ ವಿಭಾಗಗಳನ್ನು ಒಳಗೊಂಡ ‘ಅತ್ಯುತ್ತಮ ಕ್ಲಬ್ ಪ್ರಶಸ್ತಿ’ (Best Club Under All Avenues of Service)
ಯುವ ಸಬಲೀಕರಣ ಮತ್ತು ಶಿಕ್ಷಣ: ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ‘ಶಿಕ್ಷಣ ಪ್ರಶಸ್ತಿ’ ಹಾಗೂ ಯುವಜನತೆಗಾಗಿ ಕೈಗೊಂಡ ಕಾರ್ಯಕ್ರಮಗಳಿಗೆ ‘ಅತ್ಯುತ್ತಮ ಯುವ ಸೇವಾ ಕ್ಲಬ್’ ಗೌರವ.
ಮಹಿಳಾ ಸಬಲೀಕರಣ ಮತ್ತು ಸಮುದಾಯ ಪ್ರಗತಿ: ‘ವುಮೆನ್ ಎಂಪವರ್‌ಮೆಂಟ್’ ಮತ್ತು ‘ಕಮ್ಯುನಿಟಿ ಎಕನಾಮಿಕ್ ಡೆವಲಪ್‌ಮೆಂಟ್’ ವಿಭಾಗದಲ್ಲಿ ವಿಶೇಷ ಸಾಧನೆ ಪ್ರಶಸ್ತಿ.
ಆರೋಗ್ಯ ಮತ್ತು ಪರಿಸರ ಕಾಳಜಿ: ಪರಿಸರ ಸಂರಕ್ಷಣೆಗಾಗಿ ‘ಹಾಸಿರೆ ಉಸಿರು’ ಮತ್ತು ‘ರಾಸ್ತೆ ಸಂಚಾರ ಸುರಕ್ಷತೆ’ ಅಭಿಯಾನಕ್ಕೆ ವಿಶೇಷ ಗೌರವ ಹಾಗೂ ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸಾ (Disease Prevention & Treatment) ವಿಭಾಗದಲ್ಲಿ ಗಣನೀಯ ಸಾಧನೆ.
ಅಂತರರಾಷ್ಟ್ರೀಯ ಮತ್ತು ವೃತ್ತಿಪರ ಸೇವೆ: ‘ಇಂಟರ್‌ನ್ಯಾಷನಲ್ ಅಂಡರ್‌ಸ್ಟ್ಯಾಂಡಿಂಗ್’ ಮತ್ತು ವೃತ್ತಿಪರ ನೈಪುಣ್ಯತೆಗಾಗಿ ‘ವೊಕೇಶನಲ್ ಅವಾರ್ಡ್ಸ್’ ಲಭಿಸಿದೆ.
ಸದಸ್ಯತ್ವ ವೃದ್ಧಿ ಮತ್ತು ಸೌಹಾರ್ದತೆ: ‘ಮೆಂಬರ್‌ಶಿಪ್ ಡೆವಲಪ್‌ಮೆಂಟ್’ ಹಾಗೂ ರೋಟರಿ ಫೆಲೋಶಿಪ್ ಕಾರ್ಯಕ್ರಮಗಳಿಗೆ ಜಂಟಿ ಗೌರವ ದೊರೆತಿದೆ.
ಜಿಲ್ಲಾ ಗವರ್ನರ್ ರೋ. ಕೆ. ಪಾಲಾಕ್ಷ, ಸಹಾಯಕ ಗವರ್ನರ್ ರೋ. ಆನಂದ ಶೆಟ್ಟಿ ಮತ್ತು ಜಿಲ್ಲಾ ಪ್ರಶಸ್ತಿ ಸಮಿತಿ ಅಧ್ಯಕ್ಷರಾದ ರೋ. ದೇವಾನಂದ್ ಅವರು ಕ್ಲಬ್‌ನ ಈ ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿ ಮುಂತಾದವರು ಉಪಸ್ಥಿತರಿದ್ದರು
ರೋಟರಿ ಕ್ಲಬ್ ಬ್ರಹ್ಮಾವರ ಸಂಸ್ಥೆಯ ಅಧ್ಯಕ್ಷರಾದ ರೋ. ಸತೀಶ್ ಶೆಟ್ಟಿ ಮತ್ತು ಕಾರ್ಯದರ್ಶಿ ರೋ. ರೆಕ್ಸನ್ ರಾಯ್ ಮೋನಿಸ್ ಹಾಗೂ ಕ್ಲಬ್‌ನ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now