25 ಗಂಟೆಗಳ ಗಾಯನದಿಂದ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ

25 ಗಂಟೆಗಳ ಗಾಯನದಿಂದ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ
0Shares

ಉಡುಪಿ: ವಿದುಷಿ ಸಂಗೀತಾ ಬಾಲಚಂದ್ರ ಅವರು

ನಿರಂತರ 25 ಗಂಟೆಗಳ ಕಾಲ ಏಕವ್ಯಕ್ತಿ ದಾಸರಪದ ಗಾಯನದ ಮೂಲಕ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದಾರೆ. ಉಡುಪಿಯ ಗೀತಾ ಮಂದಿರದಲ್ಲಿರುವ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ದಾಸರ ಪದಗಳ ಮೂಲಕ ಭಕ್ತಿ ಭಾವದ ಉದ್ದೀಪನ ಮಾಡಿದ ಸಂಗೀತಾ ಬಾಲಚಂದ್ರ ದಾಖಲೆಯ ಪುಟ ಸೇರಿದರು.

ಸತತ 25 ಗಂಟೆಗಳ ಗಾಯನ ಕಾರ್ಯಕ್ರಮ ಸೋಮವಾರ (ಆ.24) ಮುಂಜಾನೆ ಸಂಪನ್ನವಾಯಿತು. ಈ ಸಮಯದಲ್ಲಿ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ನೀಡಲಾಯಿತು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಏಷ್ಯಾ ಹೆಡ್ ಡಾ| ಮನೀಷ್ ವಿಷ್ಟೋಯಿ ದಾಖಲೆ ಹಸ್ತಾಂತರಿಸಿದರು.

ವಿದುಷಿ ಸಂಗೀತಾ ಬಾಲಚಂದ್ರ ಅವರ ಸಾಧನೆಯನ್ನು ಗುರುತಿಸಿ, ‘ಗೀತ ಗಂಗೋತ್ರಿ’ ಬಿರುದನ್ನು ಅದಮಾರು ಮಠಾಧೀಶ ಪರಮಪೂಜ್ಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ನೀಡಿ ಸನ್ಮಾನಿಸಿದರು.

ಪಂಚವಿಶಂತಿ ಕಾರ್ಯಕ್ರಮದಲ್ಲಿ ರವಿವಾರ ಬೆಳಗ್ಗೆ 6.41ಕ್ಕೆ ಗಾಯನ ಆರಂಭಗೊಂಡಿತ್ತು, ಪ್ರತಿ 3 ಗಂಟೆಗಳಿಗೊಮ್ಮೆ 15 ನಿಮಿಷಗಳ ಕಾಲ ನೀರು, ಕನಿಷ್ಠ ಆಹಾರ ಸೇವನೆಗಾಗಿ ವಿಶ್ರಾಂತಿ ಪಡೆಯುತ್ತಿದ್ದರು. 25 ಗಂಟೆಗಳ ಅವಧಿ ಎಂದರೆ ಸೋಮವಾರ ಬೆಳಗ್ಗೆ 7.30ರ ವರೆಗೆ ಈ ಕಾರ್ಯಕ್ರಮ ನಡೆಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now