
ಕಲ್ಯಾಣ್ಪುರ : ಉಡುಪಿ ಜಿಲ್ಲೆಯ ಕಲ್ಯಾಣ್ಪುರ ಮಿಲಾಗ್ರಿಸ್ ಚರ್ಚ್‌ನ ಸಭಾಂಗಣದಲ್ಲಿ ಕಥೋಲಿಕ್ ಸಭಾ ಉಡುಪಿ ಪ್ರದೇಶ್ (ರಿ.) ಇವರ ವತಿಯಿಂದ ʼಕೊಂಕಣಿ ಮಾನ್ಯತಾ ದಿನಾಚರಣೆ- 2026ʼ ಅನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಮಿಲಾಗ್ರಿಸ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವ.ಸ್ವಾ. ಫ್ರಾನ್ಸಿಸ್ ಲುವಿಸ್‌ರವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 18 ಜನ ಕೊಂಕಣಿ ಸಾಧಕರನ್ನು ಹಾಗೂ 2 ಮಹಾ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಖ್ಯಾತ ಯುವ ಸಾಹಿತಿಗಳಾದ ಎರಿಕ್ ಸೊನ್ಸ್, ಕಥೋಲಿಕ್ ಸಭಾ ಪ್ರಾಂತ್ಯಾಧ್ಯಕ್ಷರಾದ ಜೋಯೆಲ್ ಅಲ್ಮೇಡಾ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು. ರೋಶನ್ ಡಿಸೋಜ ಕೊಳಲ್‌ಗಿರಿಯವರು ಕಾರ್ಯಕ್ರಮ ನಿರೂಪಿಸಿ, ಅರ್ಚಿ ಬಾಲ್ಡ್ ಫುರ್ಟಾಡೊರವರು ವಂದನಾರ್ಪಣೆಗೈದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now