
“ಆಟಿದ ನೆನಪು.. ತಿನಸುದ ತಂಪು”..
ಉಪ್ಪೂರು ಬಂಟರ ಸಂಘದ ಕಾರ್ಯಕ್ರಮವಾಗಿ “ಆಟಿದ ನೆನಪು.. ತಿನಸುದ ತಂಪು”.. ರೋಯಲ್ ಕಂಪೌಂಡಿನಲ್ಲಿ
ಪ್ರಶಾಂತ್ ಶೆಟ್ಟಿ ಅಮ್ಮುಂಜೆ ಯವರ ಅಧ್ಯಕ್ಷತೆಯಲ್ಲಿ ಗೌರವ ಅಧ್ಯಕ್ಷರಾದ ರೋಯಲ್ ರತ್ನಾಕರ ಡಿ ಶೆಟ್ಟಿ ರವರು ಮತ್ತು ಶಾರಿಕಾ ರತ್ನಾಕರ್ ಶೆಟ್ಟಿ ಚೆನ್ನೆಮಣೆ ಆಟ ಆಡುವ ಮೂಲಕ ಮನೋರಂಜನ ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಹಾವಂಜೆ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರು ಸೀತಾರಾಮ ಶೆಟ್ಟಿ ಉಜಂಗಾರು ಉಪಸ್ಥಿತರಿದ್ದರು.
ಗ್ರಾಮೀಣ ಪಂದ್ಯ ಹಾಗೂ ವಿವಿಧ ಮನೋರಂಜನ ಪಂದ್ಯಗಳನ್ನು ವಿವಿಧ ವಿಭಾಗದಲ್ಲಿ ಮಹಿಳೆಯರಿಗೆ ಪುರುಷರಿಗೆ ಮಕ್ಕಳಿಗೆ ನಡೆಸಿ ಕೊಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಪ್ರಶಾಂತ ಶೆಟ್ಟಿ ಅಮ್ಮುಂಜೆ ಅಧ್ಯಕ್ಷತೆಯಲ್ಲಿ ರೋಯಲ್ ಕಂಪೌಂಡಿನಲ್ಲಿ ಜರುಗಿತು. ಸಭಾ ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ರೋಯಲ್ ರತ್ನಾಕರ್ ಡಿ ಶೆಟ್ಟಿ ದಂಪತಿಗಳು, ಸ್ಥಾಪಕ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ನರ್ನಾಡು, ನಿವೃತ್ತ ಶಿಕ್ಷಕಿ ಶಕುಂತಲಾ ಆರ್ ಹೆಗ್ಡೆ, ಮುಖ್ಯ ಅತಿಥಿಯಾದ ಹಾವಂಜೆ ಬಂಟರ ಸಂಘದ ನೂತನ ಅಧ್ಯಕ್ಷರು ಪ್ರಶಾಂತ್ ಶೆಟ್ಟಿ, ಗೌರವಾಧ್ಯಕ್ಷರಾದ ರತ್ನಾಕರ ಶೆಟ್ಟಿ ಹವರಾಲು , ಕಾರ್ಯದರ್ಶಿ ದಿನೇಶ ಶೆಟ್ಟಿ ಅಮ್ಮುಂಜೆ , ಕೋಶಾಧಿಕಾರಿ ಕಲಾರಾಣಿ ಎಸ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಟಿ ವಿಶೇಷತೆಯ ವಿಚಾರಧಾರೆಯನ್ನು ದಿಕ್ಸೂಚಿ ಮಾತಿನ ಮೂಲಕ ಮಾಹೆ ಸಂಸ್ಥೆಯ ಪ್ರೊಫೆಸರ್ ಡಾ. ಪ್ರಶಾಂತ ಶೆಟ್ಟಿ ನರ್ನಾಡು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ತಿಳಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ
46 ಬಗೆ ಬಗೆಯ ವಿವಿಧ ಖಾದ್ಯ ತಿಂಡಿ ತಿನಿಸುಗಳನ್ನು ಉಪ್ಪೂರಿನ ಬಂಟರು ಮನೆಯಲ್ಲಿಯೇ ತಯಾರಿಸಿ ತಂದು 250 ಕ್ಕೂ ಹೆಚ್ಚಿನ ಬಂಟರೆಲ್ಲರೂ ಈ ಸವಿರುಚಿಯನ್ನು ಸವಿಯುವ ಅವಕಾಶ ಸಹ ಭೋಜನದಲ್ಲಿ ಸಾಕ್ಷಿಯಾಯಿತು. ವಿವಿಧ ಗ್ರಾಮೀಣ ಸಂಸ್ಕೃತಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದು ಸಭಾ ಕಾರ್ಯಕ್ರಮದ ಆರಂಭವು ವನಿತಾ ಸಂದೀಪ್ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಆರಂಭಿಸಿ, ಸಂಘದ ಅಧ್ಯಕ್ಷರು ಸ್ವಾಗತಿಸಿ, ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶ್ರೀನಿಧಿ ಶೆಟ್ಟಿ ಮತ್ತು ಚರಿತ ಜಯರಾಮ್ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ಸುನೀಲ್ ಶೆಟ್ಟಿ ವಂದಿಸಿದರು. ರೋಯಲ್ ದಂಪತಿಗಳ ಸೂಕ್ತ ಮಾರ್ಗದರ್ಶನ, ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವು ವಿಭಿನ್ನ ಶೈಲಿಯಲ್ಲಿ ಯಶಸ್ವಿಯಾಗಿ ನಡೆಯಿತು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now