ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ದಲಿತ ಮಹಿಳೆಗೆ ಅವಮಾನ: ಒಬ್ಬ ಬಂಧನ, ಪ್ರತಿದಾಳಿ ಪ್ರಕರಣದಲ್ಲಿ ಇಬ್ಬರು ಅರೆಸ್ಟ್

ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ದಲಿತ ಮಹಿಳೆಗೆ ಅವಮಾನ: ಒಬ್ಬ ಬಂಧನ, ಪ್ರತಿದಾಳಿ ಪ್ರಕರಣದಲ್ಲಿ ಇಬ್ಬರು ಅರೆಸ್ಟ್
0Shares

ಕೊಲ್ಲೂರು ಪೊಲೀಸ್‌ ಠಾಣಾ ಬೆಳ್ಳಾಲ ಗ್ರಾಮ ವ್ಯಾಪ್ತಿಯಲ್ಲಿ ದಿನಾಂಕ 06.08.2026 ರಂದು ಫಿರ್ಯಾದುದಾರರಾದ ನೊಂದ ಮಹಿಳೆಯೊಬ್ಬಳು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಂತೆ ಸನತ್‌ ಕುಂದಾಪುರ ಎಂಬುವವರು ಅವರ ಮನೆಯ ಹತ್ತಿರ ಬಂದು ಅವರ ಮಾನಕ್ಕೆ ಕುಂದುಂಟಾಗುವಂತೆ ವರ್ತಿಸಿ ಜಾತಿ ನಿಂದನೆ ಮಾಡಿದ ಕುರಿತಂತೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 51/2026ರಲ್ಲಿ ದಲಿತ ದೌರ್ಜನ್ಯದ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆರೋಪಿತನನ್ನು ಬಂಧಿಸಿರುತ್ತಾರೆ. ಸದ್ರಿ ಸಮಯದಲ್ಲಿ ನೊಂದ ಮಹಿಳೆಯ ಕುಟುಂಬಸ್ಥರು ಆ ಯುವಕನನ್ನು ಕಟ್ಟಿ ಹಲ್ಲೆ ನಡೆಸಿದ ಕುರಿತಂತೆ ಯುವಕ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 52/2026 ಕೊಲೆ ಯತ್ನ ಮತ್ತು ವಿವಿಧ ಕಲಂ ನಡಿ ಪ್ರಕರಣ ದಾಖಲಾಗಿದ್ದು ಇದರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿರುತ್ತದೆ. ಎರಡೂ ಪ್ರಕರಣಗಳು ತನಿಖೆಯಲ್ಲಿದ್ದು ಶೀಘ್ರದಲ್ಲಿ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗುವುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now