
ಶಿರ್ವಾ: ದಾಖಲುಪಿರ್ಯಾದಿದಾರರಾದ ವಿಲ್ಲಿಯಮ್ ಪಾವ್ಲ್ ಕೊರೆಯರವರಿಗೆ ದಿನಾಂಕ 28/07/2026 ರಂದು ಮದ್ಯಾಹ್ನ 2:00 ಗಂಟೆಗೆ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಮೊಬೈಲ್ ನಂಬ್ರಕ್ಕೆ ಕರೆ ಮಾಡಿ ಹಿಂದಿ ಭಾಷೆಯಲ್ಲಿ ನಿಮ್ಮ ಹೆಸರು ವಿಲ್ಲಿಯಮ್ ನಿವೇನಾ ಎಂಬುದಾಗಿ ಕೇಳಿ ನಿಮ್ಮ ಹೆಸರಿಗೆ ಒಂದು SIM issue ಆಗಿದೆ ಈ ನಂಬ್ರದಲ್ಲಿ 20 ಕೇಸ್ ದಾಖಲಾಗಿದೆ. ನೀವು ಮನಿ ಲಾಂಡ್ರಿಂಗ್ ಕೇಸ್ ನ ಜೆಸ್ಸಿ ಮೊಹಮ್ಮದ್ ಕೇಸ್ ನಲ್ಲಿ ನಿಮ್ಮ ಹೆಸರಿದೆ ಎಂದು ಹೇಳಿ 6 ಜನರ ಫೋಟೋ ಕಳಿಸಿ ಇವರ ಪರಿಚಯ ಇದೆಯೇ ಎಂದು ಹೆದರಿಸಿರುತ್ತಾರೆ. ಅಲ್ಲದೇ ಸಬ್ ಇನ್ ಸ್ಪೆಕ್ಟರ್ ಮ್ಯಾಥ್ಯೂ ಕೊಲಬಾ ಪೊಲೀಸ್ ಸ್ಟೇಷನ್ ಎಂದು ಮಾತಾನಾಡಿ ಪಿರ್ಯಾದಿದಾರರಿಗೆ ಕೂಡಲೇ ಹಣ ಹಾಕುವಂತೆ ತಿಳಿಸಿದಾಗ ಪಿರ್ಯಾದಿದಾರರು ಭಯದಿಂದ ಯೂನಿಯನ್ ಬ್ಯಾಂಕ್ ನ ಎರಡು ಖಾತೆಯಿಂದ ದಿನಾಂಕ 29/07/2026 ರಂದು 6 ಲಕ್ಷ ಹಣವನ್ನು ಹಾಗೂ ದಿನಾಂಕ 30/07/2026 ರಂದು ಬೆಳಿಗ್ಗೆ 5 ಲಕ್ಷ ಹಣವನ್ನು ವರ್ಗಾಯಿಸಿ ಪಿರ್ಯಾದಿದಾರರು ವಂಚನೆಗೆ ಒಳಗಾಗಿರುತ್ತಾರೆ. ಮ್ಯಾಥ್ಯೂ ಮತ್ತು ಇತರೆ ಅಪರಿಚಿತ ವ್ಯಕ್ತಿಗಳು ನನಗೆ ಸಬ್ ಇನ್ ಸ್ಪೆಕ್ಟರ್ ಮ್ಯಾಥ್ಯೂ ಕೊಲಬಾ ಪೊಲೀಸ್ ಸ್ಟೇಷನ್ ಎಂದು ನಂಬಿಸಿ, ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2026 ಕಲಂ:316(2),318(2) BNS & ಕಲಂ: 66(ಸಿ), 66(ಡಿ) IT Act ರಂತೆ ಪ್ರಕರಣ ದಾಖಲಾಗಿರುತ್ತದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now