ಉಡುಪಿ ಅಕ್ಕಪಡೆಯ ತ್ವರಿತ ಕಾರ್ಯಾಚರಣೆ – ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ!

ಉಡುಪಿ ಅಕ್ಕಪಡೆಯ ತ್ವರಿತ ಕಾರ್ಯಾಚರಣೆ – ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ!
0Shares

ದಿನಾಂಕ 19/07/2026 ರಂದು ಉಡುಪಿ ಜಿಲ್ಲೆ ಅಕ್ಕಪಡೆಗೆ ಜಿಲ್ಲಾ ಕಂಟ್ರೋಲ್ ರೂಮ್ ನಿಂದ ಕರೆ ಮಾಡಿ, ಎಂಟನೇ ತರಗತಿಯ ಒಬ್ಬ ಹುಡುಗ ಕಾಣೆಯಾಗಿರುವ ಬಗ್ಗೆ ತಿಳಿಸಿರುತ್ತಾರೆ. ತಕ್ಷಣಕ್ಕೆ ಸ್ಪಂದಿಸಿದ ಅಕ್ಕಪಡೆಯ ಸಿಬ್ಬಂದಿಗಳು ಕಾಣೆಯಾಗಿರುವ ಹುಡುಗನ ಹುಡುಕಾಟ ಆರಂಭಿಸಿರುತ್ತಾರೆ.

ನಂತರ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿ ಹುಡುಕುತ್ತಿರುವಾಗ, ಕಾಣೆಯಾಗಿರುವ ಹುಡುಗ ಮುದ್ದೇಬಿಹಾಳಕ್ಕೆ ಹೊರಟಿದ್ದು ಕಂಡುಬಂದಿರುತ್ತದೆ. ತಕ್ಷಣ ಕಾರ್ಯಪ್ರವರ್ತರಾದ ಅಕ್ಕ ಪಡೆಯ ಸಿಬ್ಬಂದಿಗಳು, ಮುದ್ದೇಬಿಹಾಳಕ್ಕೆ ತೆರಳುತ್ತಿರುವ ಬಸ್ ನ್ನು ನಿಲ್ಲಿಸಿ, ಬಸ್ಸಿನಲ್ಲಿದ್ದ ಬಾಲಕನನ್ನು ವಶಕ್ಕೆ ಪಡೆದು, ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿರುತ್ತಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now