
ಬ್ರಹ್ಮಾವರ : ಇಲ್ಲಿಯ ಸೈoಟ್ ಮೇರಿಸ್ ಓರ್ಥೋಡೊಕ್ಸ್ ಸಿರಿಯನ್ ಕೆಥೆದ್ರಲ್ ಜುಲೈ 22 ಮತ್ತು 23 ರಂದು ಆಶೀರ್ವದಿಸಲ್ಪಟ್ಟ ರೋ. ಜೆ. ನೊರೋನ್ಹರ 90ನೇ ಪುಣ್ಯ ಸ್ಮರಣೆಯ ಹಬ್ಬ ನಡೆಯಲಿದೆ.
ಜುಲೈ 22 ಬುಧವಾರ ಸಂಜೆ 5:00 ಗಂಟೆಗೆ ಬ್ರಹ್ಮಾವರ ಕೆಥೆದ್ರಲ್ ನಿoದ ಭಕ್ತಾದಿಗಳ ಪಾದಯಾತ್ರೆ ನಡೆಯಲಿದ್ದು, ಬಳಿಕ 6:30ಕ್ಕೆ ಸಂಧ್ಯಾ ಪ್ರಾರ್ಥನೆ ಮತ್ತು ಮಧ್ಯಸ್ಥಿಕೆ ಪ್ರಾರ್ಥನೆ ನಡೆಯಲಿದೆ. ಸಂಜೆಯ ಪ್ರಾರ್ಥನಾ ವಿಧಿಗಳ ಬಳಿಕ ಎಲ್ಲ ಭಕ್ತಾದಿಗಳಿಗೆ ಭೋಜನಕೂಟದ ವ್ಯವಸ್ಥೆ ಮಾಡಲಾಗಿದೆ.
ಜುಲೈ 23 ಗುರುವಾರದಂದು ಪುಣ್ಯ ಸ್ಮರಣೆಯ ಹಬ್ಬ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ಹಬ್ಬದ ಪವಿತ್ರ ದಿವ್ಯ ಬಲಿ ಪೂಜೆ ಮತ್ತು ಸಂದೇಶ, 12 ಗಂಟೆಗೆ ಆಶೀರ್ವಾದ, ಬಳಿಕ ಭೋಜನಕೂಟದ ವ್ಯವಸ್ಥೆ ಇದೆ.
ಪುಣ್ಯ ಸ್ಮರಣೆಯ ಹಬ್ಬದ ಪ್ರಯುಕ್ತ ಈಗಾಗಲೇ 9 ದಿನಗಳ ನೊವೇನ ಪ್ರಾರ್ಥನೆಗಳು ಭಕ್ತಿಯಿಂದ ನಡೆದಿದ್ದು, ನೂರಾರು ಭಕ್ತರು ನೊವೇನ ಪ್ರಾರ್ಥನೆಗಳಲ್ಲಿ ಭಾಗವಹಿಸಿ ಆಶೀರ್ವಾದ ಪಡೆದಿದ್ದಾರೆ.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now