ಜುಲೈ 20 ರ ವರೆಗೆ ಬದುಕಿರುತ್ತೇನೆ : ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್

ಜುಲೈ 20 ರ ವರೆಗೆ ಬದುಕಿರುತ್ತೇನೆ : ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್
0Shares

ನವದೆಹಲಿ: ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸೊನಮ್ ವಾಂಗ್ಟಕ್ ಅವರು 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆರೋಗ್ಯದ ಸ್ಥಿತಿ ಕ್ಷೀಣಿಸುತ್ತಿದ್ದರೂ, ಹೋರಾಟದ ಸಂಕಲ್ಪ ಮಾತ್ರ ಕುಗ್ಗಿಲ್ಲ ಎಂದು ಅವರು ತಿಳಿಸಿದ್ದಾರೆ.

ದೆಹಲಿಯ ಜಂತ‌ರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಏನೇ ಪರಿಸ್ಥಿತಿ ಎದುರಾದರೂ ಜುಲೈ 20ರವರೆಗೆ ಬದುಕಿರುತ್ತೇನೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ನಾನು ಹೊರಗಿನಿಂದ ಬಲಹೀನನಾಗಿ ಕಾಣಿಸಬಹುದು, ಆದರೆ ಒಳಗಿನಿಂದ ತುಂಬಾ ಗಟ್ಟಿಯಾಗಿದ್ದೇನೆ. ನಿಮ್ಮೆಲ್ಲರಿಗೂ ಇಷ್ಟೇ ಶಕ್ತಿ ಇದೆ ಎಂದು ನಾನು ನಂಬುತ್ತೇನೆ. ಜುಲೈ 20 ರಂದು ನಾವು ಸಂಸತ್ತಿನವರೆಗೆ ಶಾಂತಿಯುತ ಮೆರವಣಿಗೆ ನಡೆಸಲಿದ್ದೇವೆ. ನಾವೆಲ್ಲರೂ ಒಟ್ಟಾಗಿ ಹೋಗಿ ಪ್ರಜಾಪ್ರಭುತ್ವದ ದೇಗುಲದಲ್ಲಿ ನಮ್ಮ ಬೇಡಿಕೆಯನ್ನು ಇಡಲಿದ್ದೇವೆ. ಅದಕ್ಕೆ ಈ ಶಕ್ತಿ ನಮಗೆ ಬೇಕು’ ಎಂದಿದ್ದಾರೆ.

ಮುಂದುವರಿದು ‘ಹೇಗಾದರೂ ಮಾಡಿ ನಾನು ಜುಲೈ 20ರ ತನಕ ಬದುಕಿರುತ್ತೇನೆ. ಒಂದು ವೇಳೆ ನೀವೆಲ್ಲ ಬಾರದೇ ಆ ದಿನದ ಮೆರವಣಿಗೆ ಯಶಸ್ವಿ ಯಶಸ್ವಿಯಾಗದಿದ್ದರೆ, ನಾನು ದೆವ್ವವಾಗಿ ಮರಳಿ ಬರುತ್ತೇನೆ’ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now