ಪುತ್ತೂರು: ಮೈತ್ರಿ ಎಲೆಕ್ಟಿಕ್ ಕಂಪನಿಯಲ್ಲಿ ಲಿಷಾ ಕಂಪನಿಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ..!!

ಪುತ್ತೂರು: ಮೈತ್ರಿ ಎಲೆಕ್ಟಿಕ್ ಕಂಪನಿಯಲ್ಲಿ ಲಿಷಾ ಕಂಪನಿಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ..!!
0Shares

ಪುತ್ತೂರು : ಸುಷಾ ಚೇಂಬರ್ಸ್‌ನಲ್ಲಿರುವ ಮೈತ್ರಿ ಎಲೆಕ್ಟಿಕ್ ಕಂಪನಿಯಲ್ಲಿ ಗುರುವಾರ (09/07/2026) ಸಂಜೆ 5 ಗಂಟೆಗೆ ಲಿಷಾ ಕಂಪನಿಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು.

ಲಿಷಾ ಕಂಪನಿಯ ವಿವಿಧ ಉತ್ಪನ್ನಗಳ ಬಗ್ಗೆ ತಾಂತ್ರಿಕರಿಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಂಪನಿಯ ಮಂಗಳೂರು ವಿಭಾಗದ ಎಎಸ್‌ಎಂ ಶ್ರೀ ಶ್ರೀಪತಿ ಮಯ್ಯ ಅವರು ಕಾರ್ಯಗಾರವನ್ನು ನಡೆಸಿಕೊಟ್ಟು, ಸುಮಾರು 40 ನಿಮಿಷಗಳ ಕಾಲ ಟೆಕ್ನಿಷಿಯನ್‌ಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಉತ್ಪನ್ನಗಳ ವೈಶಿಷ್ಟ್ಯಗಳು, ಬಳಕೆ, ಅನುಕೂಲಗಳು ಹಾಗೂ ಮಿತಿಗಳ ಕುರಿತು ವಿವರವಾಗಿ ಮಾಹಿತಿ ನೀಡಿ, ತಾಂತ್ರಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಮೈತ್ರಿ ಎಲೆಕ್ನಿಕ್ ಕಂಪನಿಯ ಮಾಲಿಕರಾದ ಶ್ರೀ ರವಿನಾರಾಯಣ ಎಂ ಅವರು ಉಪಸ್ಥಿತರಿದ್ದ ಎಲ್ಲರನ್ನು ಸ್ವಾಗತಿಸಿ, ಮುಂದೆಯೂ ಇದೇ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now