
ಡಲ್ಲಾಸ್: ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಲೊ ಅವರ ಫಿಫಾ ವಿಶ್ವಕಪ್ ಕನಸು ಮತ್ತೊಮ್ಮೆ ಕಣ್ಣೀರಿನಲ್ಲಿ ಅಂತ್ಯಗೊಂಡಿದೆ.
2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟ‌್ರಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ 1-0 ಗೋಲು ಅಂತರದ ಜಯ ಗಳಿಸಿರುವ ಸ್ಪೇನ್, ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.
ಸ್ಪೇನ್ ತಂಡದ ಮೈಕೆಲ್ ಮೆರಿನೊ ಕೊನೆಯ ಕ್ಷಣದಲ್ಲಿ ಬಾರಿಸಿದ ಗೋಲು ಪೋರ್ಚುಗಲ್ ತಂಡಕ್ಕೆ ಆಘಾತ ನೀಡಿತು. ಇದರೊಂದಿಗೆ ಫುಟ್‌ಬಾಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರನೊಬ್ಬನ ವಿಶ್ವಕಪ್ ಅಭಿಯಾನಕ್ಕೆ ತೆರೆ ಬಿದ್ದಿದೆ.
ಪಂದ್ಯದ ಕೊನೆಯ ಅವಧಿಯಲ್ಲಿ ಪೋರ್ಚುಗಲ್‌ಗೆ ಸಿಕ್ಕ ಫ್ರೀ ಕಿಕ್ ಅವಕಾಶ ಕೈತಪ್ಪಿದ ತಕ್ಷಣ, 41 ವರ್ಷದ ರೊನಾಲ್ಗೊ ಮೈದಾನದಲ್ಲೇ ಕಣ್ಣೀರು ಹಾಕಿದರು. ಅದ್ಭುತ ಕೌಶಲ್ಯದೊಂದಿಗೆ ಅನೇಕ ವೈಯಕ್ತಿಕ ದಾಖಲೆಗಳನ್ನು ಬರೆದಿದ್ದರೂ ರೊನಾಲ್ಲೊ ಪಾಲಿಗೆ ವಿಶ್ವಕಪ್ ಟ್ರೋಫಿ ಮಾತ್ರ ಕೈಗೆಟುಕಲಿಲ್ಲ.
ಜಾಹೀರಾತು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now