ಸರ್ಕಾರಿ ಅಕ್ಕಿ ವಿಚಾರದಲ್ಲಿ ಕೊಲೆ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳ ಬಂಧನ – ಕೋಟ ಪೊಲೀಸರ ಕಾರ್ಯಾಚರಣೆ*

ಸರ್ಕಾರಿ ಅಕ್ಕಿ ವಿಚಾರದಲ್ಲಿ ಕೊಲೆ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳ ಬಂಧನ – ಕೋಟ ಪೊಲೀಸರ ಕಾರ್ಯಾಚರಣೆ*
0Shares

ದಿನಾಂಕ 31.08.2026 ರಂದು ಸರಕಾರದ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ಇಟ್ಟಿರುವುದಾಗಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ BNS ರಂತೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣ ಆರೋಪಿತರುಗಳ ಪತ್ತೆಗಾಗಿ ಉಡುಪಿ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ರವರ ಇವರ ಮಾರ್ಗದರ್ಶನದಲ್ಲಿ ಕೋಟಾ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ ಕುಮಾರ್ ಆರ್, ಪಿ.ಎಸ್.ಐ(ಕಾ.&ಸು.) ಹಾಗೂ ಮಹಾಂತೇಶ ಜಾಬಗೌಡ ಪಿಎಸ್‌ಐ (ತನಿಖೆ), ಠಾಣಾ ಪಿಸಿ ವಿಜಯೇಂದ್ರ, ಪಿಸಿ ಶರತ್ ಹಾಗೂ ಪಿಸಿ ಶಿವರಾಜ್ ರವರ ತಂಡ ಪ್ರಕರಣದಲ್ಲಿ ಪಿರ್ಯಾದಿದಾರರಿಗೆ ಬೆದರಿಕೆ ಒಡ್ಡಿ ಸುಲಿಗೆಗೆ ಬೆದರಿಕೆ ಹಾಕಿದ ಆರೋಪಿಗಳಾದ ನಾಗೇಂದ್ರ ಪುತ್ರನ್‌ @ ನಾಗೇಂದ್ರ ಕೆ.ಕೆ.(37), ಗೊಬ್ಬರಬೆಟ್ಟು, ಕೋಟತಟ್ಟು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಹಾಗೂ ಪಿ. ಸುಮಂತ್ ಕುಂದರ್(40), ಪಾರಂಪಳ್ಳಿ ಪಡುಕೆರೆ, ಪಾರಂಪಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಎಂಬವರನ್ನು ದಿನಾಂಕ 02.09.2026 ರಂದು ಮೈಸೂರು ಜಿಲ್ಲೆಯ ಮೈಸೂರು ಪ್ಯಾಲೇಸ್‌ ಎದುರು ಇರುವ ವಸ್ತು ಪ್ರದರ್ಶನ ಗ್ರೌಂಡ್ ಬಳಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣ ಇನ್ನೊಬ್ಬ ಆರೋಪಿ ಸಚಿನ್‌ ಶ್ರೀಯಾನ್‌(32), ಮೂಡುಹಡು ಗ್ರಾಮ, ಸಾಸ್ತಾನ ಬ್ರಹ್ಮಾವರ ತಾಲೂಕು ಇತನನ್ನು ದಿನಾಂಕ : 01/09/2026ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now