
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಒಂದು ಲಕ್ಷ ರೂಪಾಯಿ ಅನುದಾನ ನೀಡಲಾಯಿತು,,, ಉಪ್ಪೂರು ಫರಾರಿ ಗ್ರಾಮದ ಶ್ರೀ ಬೊಬ್ಬರ್ಯ ದೈವಸ್ಥಾನಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1 ಲಕ್ಷ ರೂಪಾಯಿ ಚೆಕ್ಕನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಭಟ್ ಕೊಳಲಗಿರಿ. ಮತ್ತು ಗೌರವಾಧ್ಯಕ್ಷರಾದ ಸತೀಶ್ ಪೂಜಾರಿ ಕೀಳಂಜಿ. ಮತ್ತು ಪ್ರಧಾನ ಅರ್ಚಕರಾದ ಲಕ್ಷ್ಮೀಶ್ ಭಟ್ ಪರಾರಿ. ರವರಿಗೆ ಉಡುಪಿ ತಾಲೂಕಿನ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರಾಜು ಪೂಜಾರಿ ಹಾಗೂ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ನಾಯ್ಕ್ ವಿತರಿಸಿದರು ,,ಈ ಸಂದರ್ಭದಲ್ಲಿ , ಉಪ್ಪೂರು ವಲಯ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಒಕ್ಕೂಟದ ಅಧ್ಯಕ್ಷರಾದ ಜಯಕರ ಆಚಾರ್ಯ, ಜ್ಯೋತಿ ಪಾಟೀಲ್ ಉಪದಕ್ಷರು,ಕೃಷ್ಣರಾಜ ಭಟ್ ಕೋಶಾಧಿಕಾರಿ,ಗುರಿಕಾರ ಗಣೇಶ್ ನಾಯ್ಕ್, ಸಮಾಜ ಸೇವಕರಾದ ರೇಖಾ ಜಿ ಮರಾಠಿ, ಒಕ್ಕೂಟದ ಪದಾಧಿಕಾರಿ ಸುನೀತಾ ಪೂಜಾರ್ತಿ , ಸುನಂದಾ,,ವಲಯ ಮೇಲ್ವಿಚಾರಕರು ರಾಮು ಸ್ಥಳೀಯ ಸೇವಾ ಪ್ರತಿನಿಧಿ ಸುಧಾಕರ ಊರಿನ ಗ್ರಾಮಸ್ಥರು ಹಾಜರಿದ್ದರು,,
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now