ವಿಶ್ವ ವೈದ್ಯರ ದಿನಾಚರಣೆ: ಉಪ್ಪಿನಂಗಡಿಯ ವೈದ್ಯರಿಗೆ ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದಯಿಂದ ಗೌರವ..

ವಿಶ್ವ ವೈದ್ಯರ ದಿನಾಚರಣೆ: ಉಪ್ಪಿನಂಗಡಿಯ ವೈದ್ಯರಿಗೆ ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದಯಿಂದ ಗೌರವ..
0Shares

ಉಪ್ಪಿನಂಗಡಿ: ವಿಶ್ವ ವೈದ್ಯರ ದಿನಾಚರಣೆ-2026ರ ಅಂಗವಾಗಿ ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಉಪ್ಪಿನಂಗಡಿಯ ವಿವಿಧ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಸೇವಾನಿರತ ವೈದ್ಯರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಡಾ. ರಾಜಾರಾಮ್ ಕೆ.ಬಿ., ಡಾ. ರಮ್ಯಾ ರಾಜಾರಾಮ್, ಡಾ. ಎಂ.ಆರ್. ಶೆಣೈ, ಡಾ. ಕೆ.ಜಿ. ಭಟ್, ಡಾ. ಎಂ.ಎನ್. ಭಟ್, ಡಾ. ರಘು, ಡಾ. ಸದಾನಂದ ಕುಂದರ್, ಡಾ. ಆಶಿತ್ ಎಂ.ವಿ., ಡಾ. ಶ್ವೇತಾ ಆಶಿತ್, ಡಾ. ನಿರಂಜನ್ ರೈ, ಡಾ. ಯತೀಶ್ ಶೆಟ್ಟಿ, ಡಾ. ಸುಪ್ರೀತ್ ಲೋಬೋ, ಡಾ. ಶೌರಿ ರೈ, ಕೆಎಂಎಫ್‌ನ ಪಶುವೈದ್ಯಾಧಿಕಾರಿ ಡಾ. ಜಿತೇಂದ್ರ ಹಾಗೂ ಸೂರ್ಯ ಆಸ್ಪತ್ರೆಯ ರಾಜೇಶ್ ಭಟ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಗೌರವ ಸಲಹೆಗಾರ ವರದರಾಜ್ ಎಂ.,ಸಂಘಟನಾ ಕಾರ್ಯದರ್ಶಿ ಸೋಮಸುಂದರ್ ಕೊಡಿಪ್ಪಾನ, ಉಪ್ಪಿನಂಗಡಿ ಘಟಕದ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಮಾಸ್ಟರ್ ಕಲ್ಲೇರಿ, ರವಿ ಬೋಲೋಡಿ, ಜಯವಿಕ್ರಮ್ ಕಲ್ಲಾಪು, ಗುಣಕರ ಅಗ್ನಾಡಿ, ಸುನೀಲ್ ಕುಮಾರ್ ದಡ್ಡು, ಚಂದ್ರಶೇಖರ್ ಸನಿಲ್, ಅಜಿತ್ ಕುಮಾರ್ ಪಾಲೇರಿ, ನಿಕಟ ಪೂರ್ವ ಅಧ್ಯಕ್ಷ ನಾಣ್ಯಪ್ಪ ಕೋಟ್ಯಾನ್, ಕೋಶಾಧಿಕಾರಿ ಸದಾಶಿವ ಬಂಗೇರ ಎಲಿಯ, ಜೊತೆ ಕಾರ್ಯದರ್ಶಿ ನಯನಾ ಮನೋಹರ್, ನಿರ್ದೇಶಕರಾದ ವನಿತಾ ಕೃಷ್ಣಪ್ಪ, ವಿದ್ಯಾ ಶಿವಚಂದ್ರ ನಿಡ್ಡೆಂಕಿ, ಹೇಮಾವತಿ ಕುಕ್ಕುಜೆ, ಪುನೀತ್ ದಾಸರಮೂಲೆ, ಸದಾನಂದ ಶಿಬಾರ್ಲ, ಸುರೇಶ್ ಶಿಬಾರ್ಲ ಹಾಗೂ ಸದಸ್ಯರಾದ ಸುರೇಶ್ ಕುಮಾರ್ ಹಲೇಜಿ, ನಾರಾಯಣ ಪೂಜಾರಿ ನೀರಕಟ್ಟೆ, ಉಮೇಶ್ ಟೈಲರ್, ಸವಿತಾ ಹರೀಶ್, ವಿಕ್ರಮ್ ಬಿಳಿಯೂರು, ರಕ್ಷಿತ್ ಬಿಳಿಯೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ (ನಿ.), ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಯುವವಾಹಿನಿ ಕೃತಜ್ಞತೆ ಸಲ್ಲಿಸಿತು.

ಸನ್ಮಾನ ಸ್ವೀಕರಿಸಿದ ವೈದ್ಯರು ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ ಶುಭ ಹಾರೈಸಿದರು. ಹಿರಿಯ ವೈದ್ಯರ ಪ್ರೋತ್ಸಾಹದ ಮಾತುಗಳು ಹಾಗೂ ಸಮಾಜದ ಮೆಚ್ಚುಗೆ ಯುವವಾಹಿನಿಯ ಸದಸ್ಯರಿಗೆ ಮತ್ತಷ್ಟು ಸೇವಾ ಸ್ಪೂರ್ತಿಯನ್ನು ತುಂಬಿದ್ದು, ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now