
ಶಿರ್ವ : ಜುಲೈ 5 ರಂದು 6:30ಕ್ಕೆ ಶಿರ್ವ ಜಾಯೋ ವಿಲೇಜ್ ನಲ್ಲಿ ಶಿರ್ವ ಪೊಲೀಸರಿಂದ ಸ್ನೇಹದ ಬಾಂಧವ್ಯ ಜಾಗೃತಿ ಹಾಗೂ ರಸಮಂಜರಿ ಕಾರ್ಯಕ್ರಮ ನೆರವೇರಿತು. ಶಿರ್ವ ಶಾಲಾ ಕಾಲೇಜುಗಳಿಗೆ, ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸುತ್ತಾ ಬಂದಿರುವ ಶಿರ್ವ ಪೊಲೀಸ್ ಸಿಬ್ಬಂದಿಗಳು ಒಂದು ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.
“ಉಂಬ್ರರ್ “ಎಂಬ ತಂಡವು ಈ ಕಾರ್ಯಕ್ರಮದ ಸಂಯೋಜನೆ ನಿರೂಪಣೆ ಹಾಗೂ ಮುತುವರ್ಜಿಯನ್ನು ವಹಿಸಿತ್ತು. ಉಂಬ್ರರ್
ತಂಡವು ಜನತೆಗೆ 5 ವಿಭಿನ್ನ ಕಾರ್ಯಕ್ರಮಗಳನ್ನು ನೀಡಿ 6 ನೇ ಕಾರ್ಯಕ್ರಮ ಪೊಲೀಸರೊಂದಿಗೆ ಸ್ನೇಹದ ಬಾಂಧವ್ಯವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಪು ವೃತ್ತ ನಿರೀಕ್ಷಕರಾದ ಅಜ್ಮತ್ ಅಲಿ ದೀಪ ಬೆಳಗಿಸಿ, ಶಿರ್ವದಲ್ಲಿ ಇದು ಒಂದು ವಿಭಿನ್ನ ಕಾರ್ಯಕ್ರಮ, ಇಂತಹ ಕಾರ್ಯಕ್ರಮಗಳು ಎಲ್ಲಾ ಪರಿಸರದಲ್ಲಿ ಮೂಡಿ ಬರಲಿ ಎಂದು ಹಾರೈಸಿ ಉಂಬ್ರರ್ ತಂಡಕ್ಕೆ ಅಭಿನಂದಿಸಿದರು.

“ಪೊಲೀಸ್ ಎಂದರೆ ಭಯವಲ್ಲ ಭರವಸೆ” ಪೊಲೀಸ್ ಮತ್ತು ಜನರ ನಡುವೆ ಸ್ನೇಹದ ಬಾಂಧವ್ಯ, ಕಾರ್ಯಕ್ರಮ ಒಂದು ವಿಶಿಷ್ಟ ಶೈಲಿಯಲ್ಲಿ ಮೂಡಿ ಬಂತು. ನೀಲ್ ಕ್ವಾಡ್ರಸ್ ರವರು ನಿರೂಪಣೆ ಮಾಡಿ ವೃತ್ತ ನಿರೀಕ್ಷಕರು ಸಂವಾದಕ್ಕೆ ಸ್ಪಂದನೆ ನೀಡುತ್ತಿದ್ದರು. ಇನ್ನೊಂದು ಕಡೆಯಿಂದ ಸಂವಾದದ ಬಿಡುವಿನಲ್ಲಿ ಸಂಗೀತ ರಸಮಂಜರಿಯನ್ನು ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ, ಶಿರ್ವ ಠಾಣಾ ಎಸ್ ಐ ಸುದೇಶ್ ಶೆಟ್ಟಿ ಅವರ ಧರ್ಮಪತ್ನಿ ನಿರ್ಮಲ ಶೆಟ್ಟಿ, ಕಾರ್ಕಳ ಠಾಣಾ ಎ ಎಸ್ ಐ ಆನಂದ್ ಇವರು ಸಂಗೀತ ಸಂಜೆಯನ್ನು ನೆರವೇರಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಪೊಲೀಸ್ ಇಲಾಖೆಗೆ ಸೇರ್ಪಡೆಯ ಅವಕಾಶಗಳು, ಪೊಲೀಸ್ ಮತ್ತು ಸೇನಾ ಪಡೆಯ ವ್ಯತ್ಯಾಸ, ಆಧುನಿಕ ಅಪರಾಧಗಳು, ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಪಾಲನೆ ಇನ್ನಷ್ಟು ಬಲಗೊಳಿಸುವುದು, ಇಲಾಖೆಯ ಶಸ್ತ್ರಾಸ್ತ್ರಗಳು ಮತ್ತು ಆಧುನಿಕರಣ, ಪೊಲೀಸರ ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ಜೀವನ, ಸೈಬರ್ ಕ್ರೈಂ, ಮಾದಕ ದ್ರವ್ಯ, ಮನೆಮನೆಗೆ ಪೊಲೀಸ್ ಇತ್ಯಾದಿಗಳ ಬಗ್ಗೆ ವೃತ್ತ ನಿರೀಕ್ಷಕರು ಮಾಹಿತಿ ನೀಡಿದರು.
ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅಗತ್ಯದ ಪೊಲೀಸ್ ಇಲಾಖೆಯ ಸಂಖ್ಯೆಗಳನ್ನು ತಮ್ಮ ಮೊಬೈಲ್ಗಳಲ್ಲಿ ನಮೇದಿಸಕೊಳ್ಳಬೇಕಾಗಿ ಕೇಳಿಕೊಂಡರು, ತುರ್ತುಸೇವೆ 112, ಸೈಬರ್ ಕ್ರೈಂ 1930, ಮಹಿಳೆಯರ ಸಹಾಯವಾಣಿ 1091, ಮಕ್ಕಳ ಸಹಾಯವಾಣಿ 1098, ಹಿರಿಯ ನಾಗರಿಕರ ಸಹಾಯವಾಣಿ 1090, ಹಾಗೂ ದಾನಿಗಳು ಸಹಕರಿಸಿದಲ್ಲಿ ಶಿರ್ವ ಪರಿಸರದಲ್ಲಿ AI ಕ್ಯಾಮರಗಳನ್ನು ಅಳವಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಶಿರ್ವ ಆರೋಗ್ಯ ಮಾತ ದೇವಾಲಯದ ಪ್ರಧಾನ ಧರ್ಮಗಳು ಚಾರ್ಲ್ಸ್ ಮಿನೇಜಸ್, ಕನ್ನಡ ಚಲನಚಿತ್ರ ನಟಿ ಅಕ್ಷತಾ ಪಾಂಡವಪುರ, ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಕ್ರೈಂ ಎಸ್ ಐ ಲೋಹಿತ್ ಕುಮಾರ್, ಪೊಲೀಸ್ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಹಾಜರಿದ್ದರು. ರೀನಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿ ಲತಾ ಕ್ವಾಡ್ರಸ್ ಧನ್ಯವಾದ ನೀಡಿದರು

ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now