ಬಾರ್ಕೂರಿನಲ್ಲಿ ನೂತನ ಮೊಬೈಲ್ ಆಪ್ ‘IQ Explore’ ಜ್ಞಾನ ವೇದಿಕೆಯ ಲೋಕಾರ್ಪಣೆ

ಬಾರ್ಕೂರಿನಲ್ಲಿ ನೂತನ ಮೊಬೈಲ್ ಆಪ್ ‘IQ Explore’ ಜ್ಞಾನ ವೇದಿಕೆಯ ಲೋಕಾರ್ಪಣೆ
0Shares

ಬಾರ್ಕೂರಿನಲ್ಲಿ ನೂತನ ಮೊಬೈಲ್ ಆಪ್ ‘IQ Explore’ ಜ್ಞಾನ ವೇದಿಕೆಯ ಲೋಕಾರ್ಪಣೆ

ಬಾರ್ಕೂರು : ಶಿಕ್ಷಣ, ಜ್ಞಾನ ಮತ್ತು ಬುದ್ಧಿಶಕ್ತಿ ವೃದ್ಧಿಗೆ ನೆರವಾಗುವ ನೂತನ ಮೊಬೈಲ್ ಆಪ್ Q Explore ಅನ್ನು ಬಾರ್ಕೂರಿನ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಟ್ರಸ್ಟಿ ಬಿ. ಶ್ರೀನಿವಾಸ ಶೆಟ್ಟಿಗಾರ್ ಅವರು ಉದ್ಘಾಟಿಸಿ, ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.

ಮುಖ್ಯ ಅತಿಥಿಯಾಗಿ ಬಾರ್ಕೂರ್ ಆನ್‌ಲೈನ್ (Barkur Online) ಯೂಟ್ಯೂಬ್ ವಾಹಿನಿಯ ಸಂಸ್ಥಾಪಕರಾದ ರಾಜೇಶ್ ಶಾನಭಾಗ್ ಭಾಗವಹಿಸಿ ಮಾತನಾಡಿ, ತಂತ್ರಜ್ಞಾನವನ್ನು ಸಮಾಜದ ಜ್ಞಾನ ವೃದ್ಧಿಗೆ ಬಳಸುವ ಇಂತಹ ಪ್ರಯತ್ನಗಳು ಯುವಜನತೆಗೆ ಹೊಸ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.

ಗೌರವ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕರು ಹಾಗೂ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರೊ. ಜಯರಾಮ್ ಶೆಟ್ಟಿಗಾರ್, ವೀರೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಸಿ. ಪುರುಷೋತ್ತಮ ಶೆಟ್ಟಿಗಾರ್, ಹಿರಿಯ ನ್ಯಾಯವಾದಿಗಳಾದ ರಘುರಾಮ್ ಚೇರ್ಕಾಡಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷರಾದ ಚಂದ್ರಾವತಿ ಬ್ರಹ್ಮಾವರ ಉಪಸ್ಥಿತರಿದ್ದು, IQ Explore ಸಮಾಜಕ್ಕೆ ಜ್ಞಾನ ಮತ್ತು ಶಿಕ್ಷಣವನ್ನು ತಲುಪಿಸುವ ಮಹತ್ವದ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.

IQ Explore ಅನ್ನು ಉಡುಪಿ ಜಿಲ್ಲೆಯ ಶಿವಪ್ರಸಾದ್ ಕೆ. ಅವರು ಸ್ಥಾಪಿಸಿರುವ Swaprajna Technologies (OPC) Private ಲಿಮಿಟೆಡ್ ಸಂಸ್ಥೆಯ ಮೂಲಕ ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಸಾಮಾನ್ಯ ಸಾರ್ವಜನಿಕರ ಜ್ಞಾನವನ್ನು ವೃದ್ಧಿಸುವ ಉದ್ದೇಶದಿಂದ ಈ ಡಿಜಿಟಲ್ ವೇದಿಕೆಯನ್ನು ರೂಪಿಸಲಾಗಿದೆ.

ಈ ಆಪ್‌ನಲ್ಲಿ ವಿವಿಧ ವಿಷಯಗಳ Quiz, Word Find, Word Scramble, Spell Bee, Sudoku, Daily Challenges, Leaderboard ಹಾಗೂ Progress Tracking ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಕರ್ನಾಟಕ, ಭಾರತ, ವಿಶ್ವ, ವಿಜ್ಞಾನ, ಗಣಿತ, ಇತಿಹಾಸ, ಭೂಗೋಳ, ಸಾಹಿತ್ಯ, ಕ್ರೀಡೆ, ಕಂಪ್ಯೂಟರ್ ಜ್ಞಾನ, ಪ್ರಚಲಿತ ವಿದ್ಯಮಾನಗಳು, ವ್ಯಕ್ತಿತ್ವ ವಿಕಾಸ ಸೇರಿದಂತೆ ಸನಾತನ ಧರ್ಮ, ರಾಮಾಯಣ, ಮಹಾಭಾರತ, ಭಾಗವತ, ದೇವಾಲಯಗಳು ಹಾಗೂ ಭಾರತೀಯ ಸಂಸ್ಕೃತಿ ಕುರಿತ ಪ್ರಶ್ನೋತ್ತರ ವಿಭಾಗಗಳೂ ಇದರಲ್ಲಿವೆ.

ಸಂಸ್ಥಾಪಕರಾದ ಶಿವಪ್ರಸಾದ್ ಕೆ. ಮಾತನಾಡಿ, “ಮೊಬೈಲ್ ಅನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಜ್ಞಾನವನ್ನು ಬೆಳೆಸುವ ಸಾಧನವಾಗಿಸುವುದು IQ Explore ನ ಮುಖ್ಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜದ ವಿವಿಧ ವರ್ಗಗಳಿಗೆ ಉಪಯುಕ್ತವಾಗುವ ಇನ್ನಷ್ಟು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಯೋಜನೆ ಹೊಂದಿದ್ದೇವೆ,” ಎಂದು ತಿಳಿಸಿದರು.

ಕಾರ್ಯಕ್ರಮದ ಸಂಪೂರ್ಣ ಯೋಜನೆ ಹಾಗೂ ಸಂಘಟನೆಯ ಜವಾಬ್ದಾರಿಯನ್ನು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರು ಹಾಗೂ KannadaKaravali.com ಸಂಸ್ಥಾಪಕರಾದ ಸುಧಾಕರ್ ವಕ್ವಾಡಿ ವಹಿಸಿಕೊಂಡು, ಕಾರ್ಯಕ್ರಮದ ನಿರೂಪಣೆಯನ್ನೂ ನಡೆಸಿಕೊಟ್ಟರು. ನಯನಾ ಶಿವಪ್ರಸಾದ್ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಪದಾಧಿಕಾರಿಗಳು, ಭಕ್ತಾದಿಗಳು, ಶಿವಪ್ರಸಾದ್ ಅವರ ಸಹೋದ್ಯೋಗಿಗಳು, ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಬಂಧುಗಳು ಉಪಸ್ಥಿತರಿದ್ದು, ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು.

Google Play ಸ್ಟೋರ್ ನಲ್ಲಿ ಈಗ IQ Explore ಉಚಿತವಾಗಿ ಲಭ್ಯವಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now