
ಹಾವಂಜೆ ಗ್ರಾಮದ, ಕೊರಗಜ್ಜ ಕ್ಷೇತ್ರದಲ್ಲಿ. ದಿನಾಂಕ 21 /06/2026 ರಂದು ಭಾನುವಾರ ಕೊರಗಜ್ಜನ ಕೊಲಸೇವೆಯ ಸಂದರ್ಭದಲ್ಲಿ. ಹಲವಾರು ಧಾರ್ಮಿಕ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ಸಮಾಜಸೇವೆಯಲ್ಲಿ ಮಾಡಿದ, ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೇ,ಹಲವಾರು ಸಾಧಕರಿಗೆ ಹಾಗೂ ದೈವ ನರ್ತಕರಿಗೆ. ಶ್ರೀ ಕೊರಗಜ್ಜ ಕ್ಷೇತ್ರ ಹಾವಂಜೆ ಧರ್ಮದರ್ಶಿಗಳಾದ . ಶ್ರೀಯುತ ಭರತ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮನಿತ ಕೊಂಡವರು ಪ್ರಖ್ಯಾತ ದೈವ ನರ್ತಕರಾದ ಸುಕೇಶ್ ಬಂಗೇರ ಗೋಳಿಕಟ್ಟೆ. ಸಮಾಜಸೇವೆ ಹಾಗೂ ಸಾಮಾಜಿಕ ಸೇವೆಯಲ್ಲಿ. ಸತೀಶ್ ಪೂಜಾರಿ ಕೀಳಂಜೆ. ಮತ್ತು ವಿನೋದ್ ಶೆಟ್ಟಿ
ಸಂಸ್ಥಾಪಕ ಅಧ್ಯಕ್ಷರು ಅಖಿಲ ಭಾರತ ದೈವರಾದಕರ ಒಕ್ಕೂಟ (ರಿ ) ಕೇಂದ್ರೀಯ ಉಡುಪಿ ಜಿಲ್ಲೆ ಹಾಗೂ ಪ್ರವರ್ತಕರು ನಮ್ಮ ಉಡುಪಿ ಟಿವಿ..ಕೃಷಿಕರು ಇಸಾಬೆಲ್ಲ ಡೇಸಾ. ಹಾಗೂ ಕೃಷ್ಣ ಪೂಜಾರಿ ಅಂಜಾರು
ಅಖಿಲ ಭಾರತ ದೈವರಾಧಾಕರ ಒಕ್ಕೂಟ (ರಿ )
ಜೊತೆ ಸಂಘಟನೆ ಕಾರ್ಯದರ್ಶಿ.. ಇವರೆಲ್ಲರಿಗೂ ಶ್ರೀ ಕ್ಷೇತ್ರದಲ್ಲಿ ಸನ್ಮಾನಿಸ ಗೌರವಿಸಲಾಯಿತು. ತದನಂತರ ಶ್ರೀ ಕೊರಗಜ್ಜ ದೈವದ ಕಾಲ ಸೇವೆಯು ಬಹಳ ವಿಜೃಂಭಣೆಯಿಂದ ನಡೆಯಿತು. ಹಾಗೂ ಸಿರಿಮುಡಿ ಗಂಧ ಪ್ರಸಾದ ಭಕ್ತಾಭಿಮಾನಿಗಳಿಗೆ ಹಂಚಲಾಯಿತು.. ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾಭಿಮಾನಿಗಳು ಬರುತ್ತಿದ್ದು. ಇಲ್ಲಿನ ಕೊರಗಜ್ಜ ದೇವರ ಕಾರ್ಣಿಕತೆಗೆ ಸಾಕ್ಷಿಯಾಗಿದೆ. ಊರ ಪರ ಊರ ಭಕ್ತಾಭಿಮಾನಿಗಳ ಶ್ರೀ ಹಾವಂಜೆ ಕೊರಗಜ್ಜ ಕ್ಷೇತ್ರ ಇಲ್ಲಿ ಬರುತ್ತಿದ್ದಾರೆ.. ಈ ಕ್ಷೇತ್ರದಲ್ಲಿ ಏನೇ ಕಷ್ಟ ಕಾರ್ಪಣ್ಯ ಬಂದು ಬೇಡಿಕೊಂಡರೆ. ಕೂಡಲೇ ಸಿದ್ಧಿಯಾಗುವುದು ಎಂದು ಇಲ್ಲಿನ ಶ್ರೀ ಕೊರಗಜ್ಜ ಹಾವಂಜೆ ಧರ್ಮದರ್ಶಿಗಳಾದ ಭರತ್ ಪೂಜಾರಿ ಹಾವಂಜಿ ಇವರು ತಿಳಿಸಿರುತ್ತಾರೆ ..




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now