ಚೇತನ್ ಪಡೀಲ್, ಮನೋಜ್ ಕುಲಾಲ್ ಬಂಧನ: ಮಾಹಿತಿ ನೀಡಿದವರಿಗೆ ₹50 ಸಾವಿರ ನಗದು ಪುರಸ್ಕಾರ

ಚೇತನ್ ಪಡೀಲ್, ಮನೋಜ್ ಕುಲಾಲ್ ಬಂಧನ: ಮಾಹಿತಿ ನೀಡಿದವರಿಗೆ ₹50 ಸಾವಿರ ನಗದು ಪುರಸ್ಕಾರ
0Shares

ಈ ಮೇಲಿನ ಆರೋಪಿಗಳು ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 208/2025 ಕೋಕಾ ಕಾಯ್ದೆ ಪ್ರಕರಣದಲ್ಲಿಯ ಆರೋಪಿಗಳಾಗಿದ್ದು ತಲೆಮರೆಸಿಕೊಂಡಿರುತ್ತಾರೆ. ಈ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿಕೊಂಡು ಸಾರ್ವಜನಿಕ ಪ್ರಕಟಣೆ ನೀಡಿದ್ದು, ಮಾಹಿತಿ ನೀಡಿದ ಬಾತ್ಮೀದಾರರಿಗೆ 5೦,೦೦೦/- ರೂ ನಗದು ಬಹುಮಾನ ಘೋಷಿಸಲಾಗಿತ್ತು.

ಈ ಮೇಲೆ ತಿಳಿಸಿದ ಆರೋಪಿತರ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪ್ರಕರಣದ ಆರೋಪಿ 2,) ಚೇತನ್‌ @ ಚೇತು ಪಡೀಲ್‌ ಈತನನ್ನು ದಿನಾಂಕ: 30-04-2026 ರಂದು ಹಾಗೂ ಆರೋಪಿ 1) ಮನೋಜ್‌ ಕುಲಾಲ್‌ @ ಮನೋಜ್‌ ಕೋಡಿಕೆರೆ ಈತನನ್ನು ದಿನಾಂಕ: 11-06-2026 ರಂದು ದಸ್ತಗಿರಿ ನಡೆಸಲಾಗಿರುತ್ತದೆ.

ಆರೋಪಿ ದಸ್ತಗಿರಿ ಬಗ್ಗೆ ಮಾಹಿತಿ ನೀಡಿದ ಬಾತ್ಮೀದಾರರಿಗೆ ನಗದು ಹಣವನ್ನು ಪೊಲೀಸ್‌ ಇಲಾಖೆಯಿಂದ ನೀಡಲಾಗಿರುತ್ತದೆ.

ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟುವ ಮತ್ತು ಪತ್ತೆ ಹಚ್ಚುವ ನಿಟ್ಟಿನಲ್ಲಿ ಇದೇ ರೀತಿ ಮುಂದಕ್ಕೂ ಸಹ ಸಾರ್ವಜನಿಕರು ಪೊಲೀಸ್‌ ಇಲಾಖೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now