
ಸೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆ ಅಮ್ಮುಂಜೆ ಪಾರಂಭೋತ್ಸವ..
ಉಪ್ಪೂರು ಗ್ರಾಮದ ಅಳಿವಿನಂಚಿನಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರಾಥಮಿಕ ಶಾಲೆ ಅಮ್ಮುಂಜೆ ಇದರ ಪ್ರಾರಂಭೋತ್ಸವವನ್ನು ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ ಧರ್ಮಗುರುಗಳಾದ ರೆವೆರೆಂಡ್ ಫಾದರ್ ಜೋಸೆಫ್ ಮಚಾದೋ ಅವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ.. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಪೋಷಕರಿಗೆ ತಿಳಿಸಿದರು, ಹಾಗೂ ಶಿಕ್ಷಕರ ತ್ಯಾಗ ಮನೋಭಾವ ಹಾಗೂ ಮಾತೃವಾತ್ಸಲ್ಯವನ್ನು ನೀಡುವ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.. ಮುಖ್ಯ ಅತಿಥಿಯಾಗಿ ಆಗಮಿಸಿ ಈ ಶಾಲೆಯನ್ನು ಉಳಿಸಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರವಹಿಸಿದ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಮಾತನಾಡುತ್ತಾ.. ಮಕ್ಕಳು ಇಷ್ಟ ಪಟ್ಟು ಶಾಲೆಗೆ ಬರುವಂತಾಗಬೇಕು. ಅವರ ಪೋಷಕರಿಗೆ ಯಾವುದೇ ರೀತಿಯ ಖರ್ಚು ಬರಬಾರದು. ಆಗ ಮಾತ್ರ ನಾವು ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ. ಶಾಲೆಯಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಶ್ರೇಷ್ಠ ಸಂಸ್ಕಾರ ನೀಡುವ ಗುರುಗಳು ನಮಗೆಲ್ಲ ಶ್ರೇಷ್ಠರು ಅವರನ್ನು ಸದಾ ಗೌರವದಿಂದ ಕಾಣಬೇಕು. ಅವರಿಗೆ ವೈಯಕ್ತಿಕ ಬದುಕಿದೆ ಅನ್ನುವುದನ್ನು ನಾವು ಅರಿತುಕೊಳ್ಳಬೇಕೆಂದು ಹಾಗೂ ಶಾಲೆಯ ಉಳಿವಿಗೆ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸದಾ ಸಹಾಯಹಸ್ತ ಚಾಚುವ ದಾನಿಗಳನ್ನು ನಾವೆಂದೂ ಮರೆಯಬಾರದು ಎಂದು ತಿಳಿಸಿದರು..
ವೇದಿಕೆಯಲ್ಲಿ ಅತಿಥಿಗಳಾಗಿ ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿ, ಉಪ್ಪೂರು ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಕೊಳಲಗಿರಿ ಚರ್ಚಿನ ಕಾರ್ಯದರ್ಶಿ ಜೆಸಿಂತಾ, ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಾಕ್ಷರಾದ ಸಬಿತಾ, ವಿದ್ಯಾಪೋಷಕರು ಉದ್ಯಮಿಗಳಾದ ವಿನೋದ್ ನಾಯಕ್ ಅಮ್ಮುಂಜೆ ಉಪಸ್ಥಿತರಿದ್ದರು..
ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಅವರು 17000 ಮೊತ್ತದ ನೋಟ್ ಬುಕ್, 6000 ವೆಚ್ಚದ ಅಕ್ಷರ ದಾಸೋಹದ ಸಾಮಗ್ರಿಗಳ ವೆಚ್ಚವನ್ನು ಭರಿಸಿದ್ದಾರೆ..
ಉಪ್ಪೂರು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿಯವರು ಕಟ್ಟಡದ ರಿಪೇರಿಯ ಉಸ್ತುವಾರಿ, ನೋಟ್ ಬುಕ್, ಅಕ್ಷರ ದಾಸೋಹದ ಸಾಮಗ್ರಿಯ ವೆಚ್ಚವನ್ನು ಭರಿಸಿದ್ದಾರೆ.
ಉದ್ಯಮಿಗಳಾದ ಅಮ್ಮುಂಜೆ ವೀರೇಂದ್ರ ನಾಯಕ್ ಮಕ್ಕಳಿಗೆ ಕೊಡೆಯನ್ನು ನೀಡಿರುತ್ತಾರೆ,
ಉದ್ಯಮಿಗಳಾದ ಅಮ್ಮುಂಜೆ ಸಂದೀಪ್ ನಾಯಕ್ ಗೌರವ ಶಿಕ್ಷಕರ ವೇತನದ ವೆಚ್ಚವನ್ನು ಭರಿಸಿದ್ದಾರೆ.
ಉದ್ಯಮಿಗಳಾದ ವಿವೇಕಾನಂದ ವಿಶ್ವನಾಥ ನಾಯಕ್ ಅಮ್ಮುಂಜೆ ಅವರು ಗೌರವ ಶಿಕ್ಷಕರ ವೇತನದ ವೆಚ್ಚವನ್ನು ಭರಿಸಿದ್ದಾರೆ.
ಧಾರ್ಮಿಕ ವ್ಯಕ್ತಿತ್ವದ ರಾಘವೇಂದ್ರ ಭಟ್ ಬೆಳ್ಮಾರು ವಿದ್ಯಾರ್ಥಿಗಳ ಸಮವಸ್ತ್ರದ ವೆಚ್ಚವನ್ನು ನೀಡಿದ್ದಾರೆ.
ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವೆರೋನಿಕ ಕರ್ನೇಲಿಯೊ ವಿದ್ಯಾರ್ಥಿಗಳ ಸಮವಸ್ತ್ರದ ವೆಚ್ಚವನ್ನು ನೀಡಿದ್ದಾರೆ.
ಹಳೆ ವಿದ್ಯಾರ್ಥಿಗಳಾದ ರವಿ ಹಾಗೂ ಪ್ರದೀಪ್ ಸಮವಸ್ತ್ರದ ವೆಚ್ಚವನ್ನು ನೀಡಿದ್ದಾರೆ.
ಎ.ಸಿ.ಎ ಫ್ರೆಂಡ್ಸ್ ಕ್ಲಬ್ಬಿನ ಫ್ರಾನ್ಸಿನ್ಸ್ ರಿಚರ್ಡ್ ಡಿಸೋಜ ಸಮವಸ್ತ್ರದ ವೆಚ್ಚವನ್ನು ಭರಿಸಿದ್ದಾರೆ..
ಆರಕ್ಷಕರಾಗಿ ಕರ್ತವ್ಯ ನಿರ್ವಹಿಸುವ ಸುರೇಖಾ ಸಮವಸ್ತ್ರದ ವೆಚ್ಚವನ್ನು ಭರಿಸಿದ್ದಾರೆ.
ರೋಟೇರಿಯನ್ ವಿಜಯ್ ಮಾಯಾಡಿ ಅವರು ಗೌರವ ಶಿಕ್ಷಕರ ವೇತನ ವೆಚ್ಚವನ್ನು ಭರಿಸಿದ್ದಾರೆ.
ಉದ್ಯಮಿಗಳಾದ ಅಮ್ಮುಂಜೆ ಯಶವಂತ್ ನಾಯಕ್ ಅವರು ಮಕ್ಕಳ ರಿಕ್ಷಾ ವೆಚ್ಚವನ್ನು ಭರಿಸಿದ್ದಾರೆ.
ವಿಧ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ, ಉಷಾ ಟೀಚರ್ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳ ಪಟ್ಟಿಯನ್ನು ಸಂಗೀತ ಟೀಚರ್ ವಾಚಿಸಿದರು. ಸುಜಾತ ಟೀಚರ್ ಎಲ್ಲಾ ದಾನಿಗಳಿಗೂ ಹಾಗೂ ಅತಿಥಿಗಳಿಗೆ ಹಾಗೂ ಪೋಷಕರಿಗೆ ವಂದನಾರ್ಪಣೆಗೈದರು. ಮಮತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now