ಶಿರ್ವದಲ್ಲಿ ಉಚಿತ ನೇತ್ರ ಹಾಗೂ ಮಧುಮೇಹ ತಪಾಸಣಾ ಶಿಬಿರ ಯಶಸ್ವಿ*

ಶಿರ್ವದಲ್ಲಿ ಉಚಿತ ನೇತ್ರ ಹಾಗೂ ಮಧುಮೇಹ ತಪಾಸಣಾ ಶಿಬಿರ ಯಶಸ್ವಿ*
0Shares

ಶಿರ್ವ: ಜಿಲ್ಲಾ ಆರೋಗ್ಯ ಸೊಸೈಟಿ-ಅಂಧತ್ವ ನಿಯಂತ್ರಣ ವಿಭಾಗ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಜಾಯಿಂಟ್ಸ್ ಗ್ರೂಪ್ ಉಡುಪಿ ಹಾಗೂ ಜಿಎಸ್‌ಬಿ ಸಮಾಜ ಶಿರ್ವ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 9, 2026ರ ಮಂಗಳವಾರದಂದು ಉಚಿತ ನೇತ್ರ ತಪಾಸಣೆ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿರ್ವದ ಶ್ರೀ ವೈಷ್ಣವಿ, ಮಹಾಲಸಾ ನಾರಾಯಣಿ ದೇವಸ್ಥಾನದ ಬಳಿ ನಡೆದ ಈ ಶಿಬಿರವು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿರ್ವ ಜಿಎಸ್‌ಬಿ ಸಮಾಜದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಶೆಣೈ ಹಾಗೂ ಶ್ರೀ ಜಿ. ರಘುರಾಮ್ ಶೆಣೈ (ಪ್ರಧಾನ ಅರ್ಚಕರು, ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ, ಶ್ರೀ ಕಾಶಿಮಠ, ಶಿರ್ವ) ಅವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ
ಡಾ. ನಿತ್ಯಾನಂದ ನಾಯ್ಕ್ (ನೇತ್ರ ತಜ್ಞರು, ಜಿಲ್ಲಾ ಆಸ್ಪತ್ರೆ, ಉಡುಪಿ)
ಡಾ. ಗಾಯತ್ರಿ (ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ, ಶಿರ್ವ)
ಶ್ರೀ ಜಿ. ರಘುರಾಮ್ ಶೆಣೈ (ಪ್ರಧಾನ ಅರ್ಚಕರು, ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ, ಶ್ರೀ ಕಾಶಿಮಠ, ಶಿರ್ವ)
ಶ್ರೀ ದಿನಕರ್ ಅಮೀನ್ (ಸೆಂಟ್ರಲ್ ಕಮಿಟಿ ಸದಸ್ಯರು, ಜಾಯಿಂಟ್ಸ್ ವೆಲ್ಫೇರ್ ಫೌಂಡೇಶನ್, ಮುಂಬಯಿ) ಉಪಸ್ಥಿತರಿದ್ದರು

ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೇತ್ರ ತಪಾಸಣೆ, ಮಧುಮೇಹ (ಶುಗರ್) ಮತ್ತು ರಕ್ತದೊತ್ತಡ (ಬಿಪಿ) ಪರೀಕ್ಷೆಗಳನ್ನು ಮಾಡಲಾಯಿತು. ತಪಾಸಣೆಯ ನಂತರ ಕಣ್ಣಿನ ಪೋರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ರೋಗಿಗಳನ್ನು ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಜಾಯಿಂಟ್ಸ್ ಗ್ರೂಪ್ ಉಡುಪಿಯ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಪೂಜಾರಿ, ಆಡಳಿತ ನಿರ್ದೇಶಕರಾದ ಶ್ರೀ ದಿವಾಕರ್ ಪೂಜಾರಿ, ಜಿಎಸ್‌ಬಿ ಸಮಾಜದ ಪದಾಧಿಕಾರಿಗಳು ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಸಂಚಾರಿ ನೇತ್ರ ಘಟಕದ ತಜ್ಞರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಶಿಬಿರದ ಯಶಸ್ಸಿಗೆ ಶ್ರಮಿಸಿದರು. ‘ನೇತ್ರದಾನ-ಮಹಾದಾನ’ ಹಾಗೂ ‘ಎಲ್ಲೆಡೆಯೂ ಸ್ವಚ್ಛತೆ ಅಲ್ಲದೆ ಆರೋಗ್ಯ’ ಎಂಬ ಸಂದೇಶದೊಂದಿಗೆ ನೂರಾರು ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now