
ಮಾನ್ಯ 2nd ACJ & JMFC ನ್ಯಾಯಾಲಯ ಉಡುಪಿಯ CC No.124/2017 (ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 165/2016 ಕಲಂ.341 354(A) 354(B) IPC) ರಲ್ಲಿ 6 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಶೀಟರ್ ವಾರೆಂಟ್ ಆಸಾಮಿ ಅಭಿಜಿತ್ ಪ್ರಾಯ:34 ವರ್ಷ ತಂದೆ ಜಯ ಟಿ ಕುಂದರ್ ವಾಸ : ಶಾಲಿನಿ ನಿವಾಸ ಮೂಲ್ಕಿ ಮಂಗಳೂರು ತಾಲೂಕು ಈತನ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರು ಕಾರ್ಕಳ ಉಪವಿಭಾಗ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಕಾಪು ವೃತ್ತ ರವರ ಮಾರ್ಗದರ್ಶನದಲ್ಲಿ, ಕಾಪು ಪೊಲೀಸ್ ಠಾಣಾ ಉಪನಿರೀಕ್ಷಕರು(ಕಾ&ಸು) ತೇಜಸ್ವಿ ಮತ್ತು ಶುಭಕರ ಪಿ ಎಸ್ ಐ (ತನಿಖೆ) ರವರ ನೇತೃತ್ವದಲ್ಲಿ ಠಾಣಾ ಹೆಚ್ ಸಿ ಮೊಹಮ್ಮದ್ ರಫೀಕ್ , ಪಿಸಿ ರಾಘು ರವರು ದಿನಾಂಕ: 15-05-2026 ರಂದು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಯಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿರುತ್ತಾರೆ.
ಈತನ ವಿರುದ್ಧ ಮೈಸೂರು ನರಸಿಂಹರಾಜಪುರ ಮತ್ತು ಬಜ್ಪೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಪಾಧಿತನನ್ನು ದಿನಾಂಕ: 15-05-2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು 25.05.26 ರವರೆಗೆ
ನ್ಯಾಯಾಂಗ ಬಂಧನ ನೀಡಲಾಗಿರುತ್ತದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now