ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಜಿಲ್ಲೆ : ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಲೆ

ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಜಿಲ್ಲೆ : ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಲೆ

0Shares

ಉಡುಪಿ : ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇದರ ವತಿಯಿಂದ ಶ್ರೀ ನಾರಾಯಣ ಗುರು ಉದ್ಯಾನವದಲ್ಲಿ ನಡೆದ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಮುಖಂಡರು ಭಾಗವಹಿಸಿ ಶ್ರೀ ನಾರಾಯಣ ಗುರುಗಳ ದರ್ಶನ ಪಡೆದರು.

ಯುವ ವಾಹಿನಿ (ರಿ) ಉಡುಪಿ ಘಟಕ ಇವರಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿಂತನೆಯನ್ನು ಜಾಗೃತಿ ಕಳುಹಿಸುವ ಗುರು ಸತ್ಸಂಗ ಕಾರ್ಯಕ್ರಮವು ಗುರುವಾರ ಮತ್ತು ನಿನ್ನೆ ಶ್ರೀ ರಾಮಕೃಷ್ಣ ಭಜನಾ ಮಂಡಳಿ ಬಿಲ್ಲವ ಸೇವಾ ಸಂಘ ಕುತ್ಪಾಡಿ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಕೊನೆಯ ದಿನವಾದ ಇಂದು ಪ್ರತಿಷ್ಠಿತ ಶ್ರೀ ಬ್ರಹ್ಮ ಬೈದರ್ಕಳ ಯಕ್ಷಗಾನ ಕಲಾಮಂಡಳಿ ಬೊಳ್ಜೆ ಉದ್ಯಾವರ ಇದರ ಸದಸ್ಯರಿಂದ ಮತ್ತು ಅತಿಥಿ ಕಲಾವಿದರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಎಂ. ಎ.ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ, ರಮೇಶ್ ಕಾಂಚನ್, ದಿನೇಶ್ ಪುತ್ರನ್, ದಿವಾಕರ್ ಕುಂದರ್, ಹರೀಶ್ ಕಿಣಿ, ನಾಗೇಶ್ ಕುಮಾರ್ ಉದ್ಯಾವರ, ರವಿ ಶೆಟ್ಟಿ ಕಪ್ಪೆಟ್ಟು, ರಘುಪತಿ ಬಲ್ಲಾಳ್, ವಾಮನ ಬಂಗೇರ, ಸುಕೇಶ್ ಕುಂದರ್, ಸತೀಶ್ ಮಂಚಿ,
ಸತೀಶ್ ಕೊಡವೂರು, ಗಣೇಶ ಪೂಜಾರಿ ಗುಂಡಿಬೈಲು, ಕಿರಣ್ ಕುಮಾರ್ ಉದ್ಯಾವರ, ರೋಯ್ಸ್ ಫೆರ್ನಾಂಡೀಸ್, ರಿಯಾಝ್ ಪಳ್ಳಿ, ಸ್ಟೀವನ್ ಕುಲಾಸೋ, ಸಾಯಿರಾಜ್ ಕೋಟ್ಯಾನ್, ಶಬರೀಶ್ ಸುವರ್ಣ, ಗಿರೀಶ್ ಕುಮಾರ್ ಉದ್ಯಾವರ ಮುಂತಾದ ಗಣ್ಯರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಯುವ ವೇದಿಕೆಯ ಪ್ರಮುಖರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಮಿಥುನ್ ಅಮೀನ್, ಸಚಿನ್ ಸಾಲ್ಯಾನ್, ದಿವಾಕರ ಬೊಳ್ಜೆ, ಸುಧಾಕರ್, ಉದಯ, ಗುಣಕರ ಸನಿಲ್, ಸುಪ್ರೀತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now