ಹೆಲ್ಮೆಟ್ ಧಾರಿ ಕಳ್ಳರಿಂದ ಹುಂಡಿ ಕಳವು: ಕುಂದಾಪುರ ಪೊಲೀಸರಿಂದ ಇಬ್ಬರ ಬಂಧನ”

ಹೆಲ್ಮೆಟ್ ಧಾರಿ ಕಳ್ಳರಿಂದ ಹುಂಡಿ ಕಳವು: ಕುಂದಾಪುರ ಪೊಲೀಸರಿಂದ ಇಬ್ಬರ ಬಂಧನ”

0Shares

ಆಜ್ರಿ ಗ್ರಾಮ. ಕುಂದಾಪುರ ತಾಲೂಕಿನ ಉಮಾಮಹೇಶ್ವರ ದೇವಸ್ಥಾನದಲ್ಲಿ ದಿನಾಂಕ 20-04-2026 ಬೆಳಿಗ್ಗೆ 7:56 ಗಂಟೆ ಸುಮಾರಿಗೆ ಹೆಲ್ಮೇಟ್‌ ದರಿಸಿದ ಓರ್ವ ವ್ಯಕ್ತಿ ದೇವಸ್ಥಾನದ ಹೊರ ಪೌಳಿಗೆ ಬಂದು ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕುರಿತು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 26/2026 ಕಲಂ 331(3), 305 BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಹೆಚ್.ಡಿ ಕುಲಕರ್ಣಿ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ, ಕುಂದಾಪುರ ಹಾಗೂ ಸಂತೋಷ್ ಎ ಕಾಯ್ಕಣಿ, ಪೊಲೀಸ್ ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತರವರ ಮಾರ್ಗದರ್ಶನದಲ್ಲಿ ಶಂಕರನಾರಾಯಣ ಠಾಣಾ ಪಿ.ಎಸ್.ಐ.(ಕಾ.ಸೂ) ಐ ಆರ್ ಗಡ್ಡೇಕರ್ ಮತ್ತು ಪಿ.ಎಸ್.ಐ.(ತನಿಖೆ) ಕುಮಾರಿ ಅಕ್ಷಯ ಕುಮಾರಿ ಎಸ್ ಎನ್. ಹಾಗೂ ಸಿಬ್ಬಂದಿಯವರಾದ ಸಚಿನ್ ಶೆಟ್ಟಿ ,ಜಯರಾಮ ನಾಯ್ಕ್, ಚೇತನ್ ಕುಮಾರ್,ನವೀನ್ ನಾಯ್ಕ್ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಮೌನೇಶ್ ನಾಯ್ಕ್ ಜಿಲ್ಲಾ ತಾಂತ್ರಿಕ ವಿಭಾಗದ ದಿನೇಶ್ ರವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತರಾದ 1) ಸಂದೀಪ ಆಚಾರಿ ಪ್ರಾಯ 28 ವರ್ಷ, ತಂದೆ: ಶಂಕರ ಆಚಾರಿ, ವಾಸ: ಮಠದಮನೆ, ಎಳಬೇರು, ಕಮಲಶಿಲೆ ಗ್ರಾಮ, ಕುಂದಾಪುರ ತಾಲೂಕು 2) ಮುತ್ತಪ್ಪ ಶರಣಪ್ಪ ವಾಲಿಕರ್‌ ಪ್ರಾಯ 40 ವರ್ಷ, ತಂದೆ: ದಿ. ಶರಣಪ್ಪ ವಾಸ: ಬನಹಟ್ಟಿ ಗ್ರಾಮ, ಕುಷ್ಟಗಿ ತಾಲೂಕು , ಕೊಪ್ಪಳ ಜಿಲ್ಲೆ ರವರನ್ನು ಬಾಗಲಕೋಟೆಜಿಲ್ಲೆಯ ಇಳಕಲ್ ನಲ್ಲಿ ದಸ್ತಗಿರಿ ಮಾಡಿರುತ್ತಾರೆ. ಕೃತಕ್ಕೆ ಬಳಸಿದ ಮೋಟಾರ್ ಸೈಕಲ್ ನ್ನು ಹಾಗೂ 3 ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದು , ಕಳ್ಳತನ ಮಾಡಿದ ಉಮಾಮಹೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಅವುಗಳ ಒಟ್ಟು ಅಂದಾಜು ಮೌಲ್ಯ 1,50,000/-ರೂ ಆಗಬಹುದು.

ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂದನ ವಿದಿಸಿರುತ್ತದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now